فَتَرَى ٱلَّذِينَ فِى قُلُوبِهِم مَّرَضٌ يُسَٰرِعُونَ فِيهِمْ يَقُولُونَ نَخْشَىٰٓ أَن تُصِيبَنَا دَآئِرَةٌ فَعَسَى ٱللَّهُ أَن يَأْتِىَ بِٱلْفَتْحِ أَوْ أَمْرٍ مِّنْ عِندِهِۦ فَيُصْبِحُوا۟ عَلَىٰ مَآ أَسَرُّوا۟ فِىٓ أَنفُسِهِمْ نَٰدِمِينَ
Kannada Translation - Hamza Buturಹೃದಯಗಳಲ್ಲಿ ರೋಗವಿರುವವರು (ಕಪಟವಿಶ್ವಾಸಿಗಳು) ಅವರೊಡನೆ ಸೇರಲು ತ್ವರೆ ಮಾಡುವುದನ್ನು ನೀವು ಕಾಣುವಿರಿ. ಅವರು ಹೇಳುತ್ತಾರೆ: “ನಮಗೇನಾದರೂ ಆಪತ್ತು ಸಂಭವಿಸಬಹುದೆಂದು ನಮಗೆ ಭಯವಾಗುತ್ತಿದೆ.” ಆದರೆ ಅಲ್ಲಾಹು ನಿಮಗೆ ಗೆಲುವನ್ನು ಅಥವಾ ತನ್ನ ಕಡೆಯ ಏನಾದರೂ ಆದೇಶವನ್ನು ನೀಡಬಹುದು. ಆಗ ಅವರು ತಮ್ಮ ಮನಸ್ಸಿನಲ್ಲಿ ರಹಸ್ಯವಾಗಿಟ್ಟ ವಿಚಾರಗಳನ್ನು ನೆನೆದು ವಿಷಾದಪಡುವರು.