إِنَّ ٱلَّذِينَ تَوَفَّىٰهُمُ ٱلْمَلَٰٓئِكَةُ ظَالِمِىٓ أَنفُسِهِمْ قَالُوا۟ فِيمَ كُنتُمْ قَالُوا۟ كُنَّا مُسْتَضْعَفِينَ فِى ٱلْأَرْضِ قَالُوٓا۟ أَلَمْ تَكُنْ أَرْضُ ٱللَّهِ وَٰسِعَةً فَتُهَاجِرُوا۟ فِيهَا فَأُو۟لَٰٓئِكَ مَأْوَىٰهُمْ جَهَنَّمُ وَسَآءَتْ مَصِيرًا
Kannada Translation - Hamza Buturಸ್ವಯಂ ಅಕ್ರಮವೆಸಗಿದವರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಕೇಳುವರು: “ನೀವು ಯಾವ ಸ್ಥಿತಿಯಲ್ಲಿದ್ದಿರಿ?” ಅವರು ಹೇಳುವರು: “ನಾವು ಊರಿನಲ್ಲಿ ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿದ್ದೆವು.” ದೇವದೂತರುಗಳು ಕೇಳುವರು: “ಅಲ್ಲಾಹನ ಭೂಮಿ ವಿಶಾಲವಾಗಿತ್ತಲ್ಲವೇ? ನಿಮಗೆ ನಿಮ್ಮ ಊರನ್ನು ತ್ಯಜಿಸಿ ವಲಸೆ ಹೋಗಬಹುದಿತ್ತಲ್ಲವೇ?” ಅಂತಹವರಿಗೆ ನರಕಾಗ್ನಿಯೇ ವಾಸಸ್ಥಳವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನ!