caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Aal-i-Imraan, ಆಯತ್ 75

ಮದೀನಾ · ಅವತರಣ ಕ್ರಮ 89 · 3:75

وَمِنْ أَهْلِ ٱلْكِتَٰبِ مَنْ إِن تَأْمَنْهُ بِقِنطَارٍ يُؤَدِّهِۦٓ إِلَيْكَ وَمِنْهُم مَّنْ إِن تَأْمَنْهُ بِدِينَارٍ لَّا يُؤَدِّهِۦٓ إِلَيْكَ إِلَّا مَا دُمْتَ عَلَيْهِ قَآئِمًا ذَٰلِكَ بِأَنَّهُمْ قَالُوا۟ لَيْسَ عَلَيْنَا فِى ٱلْأُمِّيِّـۧنَ سَبِيلٌ وَيَقُولُونَ عَلَى ٱللَّهِ ٱلْكَذِبَ وَهُمْ يَعْلَمُونَ

Kannada Translation - Hamza Buturಗ್ರಂಥದವರಲ್ಲಿ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಬಂಗಾರದ ರಾಶಿಯನ್ನು ತೆಗೆದಿಡಲು ಕೊಟ್ಟರೂ (ನೀವು ಕೇಳುವಾಗ) ಅವರು ಅದನ್ನು ನಿಮಗೆ ಹಿಂದಿರುಗಿಸುತ್ತಾರೆ. ಆದರೆ ಅವರಲ್ಲಿ ಬೇರೆ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಒಂದು ಬಂಗಾರದ ನಾಣ್ಯವನ್ನು ತೆಗೆದಿಡಲು ಕೊಟ್ಟರೆ, ಪದೇ ಪದೇ ಕೇಳದೆ ಅವರು ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ. ಅದೇಕೆಂದರೆ ಅವರು ಹೇಳುತ್ತಾರೆ: “ಆ ಅನಕ್ಷರಸ್ಥರಿಗೆ (ಯಹೂದಿಗಳಲ್ಲದವರಿಗೆ) ಸಂಬಂಧಿಸಿದ ಯಾವುದೇ ವಿಷಯದಲ್ಲೂ ನಮಗೆ ಶಿಕ್ಷೆಯಿಲ್ಲ.” ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.
Looking for a topic? Try the meaning search — your question is scanned across all 6,236 verses.
ಭಾಷೆ — 70