caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Aal-i-Imraan, ಆಯತ್ 73

ಮದೀನಾ · ಅವತರಣ ಕ್ರಮ 89 · 3:73

وَلَا تُؤْمِنُوٓا۟ إِلَّا لِمَن تَبِعَ دِينَكُمْ قُلْ إِنَّ ٱلْهُدَىٰ هُدَى ٱللَّهِ أَن يُؤْتَىٰٓ أَحَدٌ مِّثْلَ مَآ أُوتِيتُمْ أَوْ يُحَآجُّوكُمْ عِندَ رَبِّكُمْ قُلْ إِنَّ ٱلْفَضْلَ بِيَدِ ٱللَّهِ يُؤْتِيهِ مَن يَشَآءُ وَٱللَّهُ وَٰسِعٌ عَلِيمٌ

Kannada Translation - Hamza Butur(ಅವರು ಪರಸ್ಪರ ಹೇಳುತ್ತಾರೆ:) “ನಿಮ್ಮ ಧರ್ಮದ ಅನುಯಾಯಿಗಳನ್ನು ಬಿಟ್ಟು ಬೇರೆ ಯಾರನ್ನೂ ನೀವು ನಂಬಬೇಡಿ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” (ಅವರು ಪರಸ್ಪರ ಹೇಳುತ್ತಾರೆ): “ನಿಮಗೆ ನೀಡಲಾದಂತಹ (ಗ್ರಂಥವನ್ನು) ಬೇರೆ ಯಾರಿಗಾದರೂ ನೀಡಲಾಗಬಹುದು; ಅಥವಾ ಅವರು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಿಮ್ಮೊಡನೆ ತರ್ಕಿಸುವರು ಎಂದು (ನೀವು ನಂಬಲೇಬೇಡಿ).” ಹೇಳಿರಿ: “ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ಕೈಯಲ್ಲಿ. ಅವನು ಇಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.”
Looking for a topic? Try the meaning search — your question is scanned across all 6,236 verses.
ಭಾಷೆ — 70