caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Hajj, ಆಯತ್ 72

ಮದೀನಾ · ಅವತರಣ ಕ್ರಮ 103 · 22:72

وَإِذَا تُتْلَىٰ عَلَيْهِمْ ءَايَٰتُنَا بَيِّنَٰتٍ تَعْرِفُ فِى وُجُوهِ ٱلَّذِينَ كَفَرُوا۟ ٱلْمُنكَرَ يَكَادُونَ يَسْطُونَ بِٱلَّذِينَ يَتْلُونَ عَلَيْهِمْ ءَايَٰتِنَا قُلْ أَفَأُنَبِّئُكُم بِشَرٍّ مِّن ذَٰلِكُمُ ٱلنَّارُ وَعَدَهَا ٱللَّهُ ٱلَّذِينَ كَفَرُوا۟ وَبِئْسَ ٱلْمَصِيرُ

Kannada Translation - Hamza Buturನಮ್ಮ ಸ್ಪಷ್ಟ ವಚನಗಳನ್ನು ಅವರಿಗೆ ಓದಿಕೊಡಲಾದರೆ, ಸತ್ಯನಿಷೇಧಿಗಳ ಮುಖಗಳಲ್ಲಿ ಅತೃಪ್ತಿ ವ್ಯಕ್ತವಾಗುವುದನ್ನು ಕಾಣಬಹುದು. ಅವರಿಗೆ ನಮ್ಮ ವಚನಗಳನ್ನು ಓದಿಕೊಡುವವರ ಮೇಲೆ ಹಲ್ಲೆ ಮಾಡುವಷ್ಟರ ಮಟ್ಟಿಗೆ ಅವರು ತಲುಪುತ್ತಾರೆ. ಹೇಳಿರಿ: “ಅದಕ್ಕಿಂತಲೂ ನಿಕೃಷ್ಟವಾದ ವಿಷಯವನ್ನು ನಾನು ನಿಮಗೆ ತಿಳಿಸಿಕೊಡಲೇ? ನರಕಾಗ್ನಿ! ಅಲ್ಲಾಹು ಅದನ್ನು ಸತ್ಯನಿಷೇಧಿಗಳಿಗೆ ವಾಗ್ದಾನ ಮಾಡಿದ್ದಾನೆ. ಅದು ಬಹಳ ನಿಕೃಷ್ಟ ಗಮ್ಯಸ್ಥಾನವಾಗಿದೆ.”
Looking for a topic? Try the meaning search — your question is scanned across all 6,236 verses.
ಭಾಷೆ — 70