وَأَتِمُّوا۟ ٱلْحَجَّ وَٱلْعُمْرَةَ لِلَّهِ فَإِنْ أُحْصِرْتُمْ فَمَا ٱسْتَيْسَرَ مِنَ ٱلْهَدْىِ وَلَا تَحْلِقُوا۟ رُءُوسَكُمْ حَتَّىٰ يَبْلُغَ ٱلْهَدْىُ مَحِلَّهُۥ فَمَن كَانَ مِنكُم مَّرِيضًا أَوْ بِهِۦٓ أَذًى مِّن رَّأْسِهِۦ فَفِدْيَةٌ مِّن صِيَامٍ أَوْ صَدَقَةٍ أَوْ نُسُكٍ فَإِذَآ أَمِنتُمْ فَمَن تَمَتَّعَ بِٱلْعُمْرَةِ إِلَى ٱلْحَجِّ فَمَا ٱسْتَيْسَرَ مِنَ ٱلْهَدْىِ فَمَن لَّمْ يَجِدْ فَصِيَامُ ثَلَٰثَةِ أَيَّامٍ فِى ٱلْحَجِّ وَسَبْعَةٍ إِذَا رَجَعْتُمْ تِلْكَ عَشَرَةٌ كَامِلَةٌ ذَٰلِكَ لِمَن لَّمْ يَكُنْ أَهْلُهُۥ حَاضِرِى ٱلْمَسْجِدِ ٱلْحَرَامِ وَٱتَّقُوا۟ ٱللَّهَ وَٱعْلَمُوٓا۟ أَنَّ ٱللَّهَ شَدِيدُ ٱلْعِقَابِ
Kannada Translation - Hamza Buturಅಲ್ಲಾಹನಿಗಾಗಿ ಹಜ್ಜ್ ಮತ್ತು ಉಮ್ರಗಳನ್ನು ಪೂರ್ತಿಗೊಳಿಸಿರಿ. ನಿಮ್ಮನ್ನು (ದಾರಿ ಮಧ್ಯೆ) ತಡೆಯಲಾದರೆ ನಿಮಗೆ ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಿರಿ.[1] ಬಲಿಮೃಗವು ಅದರ ಸ್ಥಳವನ್ನು ತಲುಪುವ ತನಕ ಕೇಶಮುಂಡನ ಮಾಡಬೇಡಿ. ನಿಮ್ಮಲ್ಲಿ ಯಾರಾದರೂ ಅನಾರೋಗ್ಯದಲ್ಲಿದ್ದು ಅಥವಾ ತಲೆಯಲ್ಲಿ ಏನಾದರೂ ತೊಂದರೆಯಿದ್ದು, (ಕೇಶ ಮುಂಡನ ಮಾಡಿದ್ದರೆ) ಅದಕ್ಕೆ ಪರಿಹಾರವಾಗಿ ಉಪವಾಸ ಅಥವಾ ದಾನಧರ್ಮ ಅಥವಾ ಬಲಿಕರ್ಮ ನಿರ್ವಹಿಸಲಿ. ಆದರೆ ನೀವು ನಿರ್ಭಯ ಸ್ಥಿತಿಯಲ್ಲಿದ್ದು, ನಿಮ್ಮಲ್ಲಿ ಯಾರಾದರೂ ಉಮ್ರಾ ನಿರ್ವಹಿಸಿ ಹಜ್ಜ್ ತನಕ ವಿಶ್ರಾಂತಿ ಪಡೆದರೆ, ಅವನು ಸುಲಭವಾಗಿರುವ ಒಂದು ಪ್ರಾಣಿಯನ್ನು ಬಲಿ ನೀಡಲಿ. ಯಾರಿಗೆ ಬಲಿಮೃಗ ಸಿಗುವುದಿಲ್ಲವೋ ಅವನು ಹಜ್ಜ್‌ನ ಸಮಯದಲ್ಲಿ ಮೂರು ದಿನ ಮತ್ತು (ಊರಿಗೆ) ಮರಳಿದ ಬಳಿಕ ಏಳು ದಿನ; ಒಟ್ಟು ಹತ್ತು ದಿನ ಉಪವಾಸ ಆಚರಿಸಲಿ. ಈ ನಿಯಮವಿರುವುದು ಮಸ್ಜಿದುಲ್ ಹರಾಮ್‍ನ ನಿವಾಸಿಗಳಲ್ಲದವರಿಗೆ ಮಾತ್ರ. ಅಲ್ಲಾಹನನ್ನು ಭಯಪಡಿರಿ. ತಿಳಿಯಿರಿ! ಅಲ್ಲಾಹು ಅತಿ ಕಠೋರವಾಗಿ ಶಿಕ್ಷಿಸುವವನಾಗಿದ್ದಾನೆ.