وَٱتَّبَعُوا۟ مَا تَتْلُوا۟ ٱلشَّيَٰطِينُ عَلَىٰ مُلْكِ سُلَيْمَٰنَ وَمَا كَفَرَ سُلَيْمَٰنُ وَلَٰكِنَّ ٱلشَّيَٰطِينَ كَفَرُوا۟ يُعَلِّمُونَ ٱلنَّاسَ ٱلسِّحْرَ وَمَآ أُنزِلَ عَلَى ٱلْمَلَكَيْنِ بِبَابِلَ هَٰرُوتَ وَمَٰرُوتَ وَمَا يُعَلِّمَانِ مِنْ أَحَدٍ حَتَّىٰ يَقُولَآ إِنَّمَا نَحْنُ فِتْنَةٌ فَلَا تَكْفُرْ فَيَتَعَلَّمُونَ مِنْهُمَا مَا يُفَرِّقُونَ بِهِۦ بَيْنَ ٱلْمَرْءِ وَزَوْجِهِۦ وَمَا هُم بِضَآرِّينَ بِهِۦ مِنْ أَحَدٍ إِلَّا بِإِذْنِ ٱللَّهِ وَيَتَعَلَّمُونَ مَا يَضُرُّهُمْ وَلَا يَنفَعُهُمْ وَلَقَدْ عَلِمُوا۟ لَمَنِ ٱشْتَرَىٰهُ مَا لَهُۥ فِى ٱلْـَٔاخِرَةِ مِنْ خَلَٰقٍ وَلَبِئْسَ مَا شَرَوْا۟ بِهِۦٓ أَنفُسَهُمْ لَوْ كَانُوا۟ يَعْلَمُونَ
Kannada Translation - Hamza Buturಶೈತಾನರು ಸುಲೈಮಾನರ ಆಡಳಿತಕಾಲದಲ್ಲಿ ಪಠಿಸುತ್ತಿದ್ದ ವಿಷಯಗಳನ್ನು ಅವರು ಹಿಂಬಾಲಿಸಿದರು. ಸುಲೈಮಾನ್ ಸತ್ಯನಿಷೇಧಿಯಾಗಿರಲಿಲ್ಲ. ಆದರೆ ಶೈತಾನರು ಸತ್ಯನಿಷೇಧಿಗಳಾಗಿದ್ದರು.[1] ಅವರು ಜನರಿಗೆ ಮಾಟಗಾರಿಕೆಯನ್ನು ಮತ್ತು ಬ್ಯಾಬಿಲೋನಿಯಾದಲ್ಲಿ ಹಾರೂತ್ ಮತ್ತು ಮಾರೂತ್ ಎಂಬ ಎರಡು ದೇವದೂತರಿಗೆ ಅವತೀರ್ಣವಾಗುತ್ತಿದ್ದ ವಿಷಯಗಳನ್ನು ಕಲಿಸುತ್ತಿದ್ದರು. ಆದರೆ, “ನಾವೊಂದು ಪರೀಕ್ಷೆಯಾಗಿದ್ದೇವೆ; ಆದ್ದರಿಂದ ನೀವು ಸತ್ಯನಿಷೇಧಿಗಳಾಗಬೇಡಿ” ಎಂದು ಹೇಳದೆ ಅವರಿಬ್ಬರು (ಹಾರೂತ್ ಮತ್ತು ಮಾರೂತ್) ಯಾರಿಗೂ ಕಲಿಸಿಕೊಡುತ್ತಿರಲಿಲ್ಲ. ಹೀಗೆ ಜನರು ಅವರಿಬ್ಬರಿಂದ ಗಂಡ-ಹೆಂಡತಿಯ ನಡುವೆ ಒಡಕು ಮೂಡಿಸುವ ತಂತ್ರಗಳನ್ನು ಕಲಿಯುತ್ತಿದ್ದರು. ಆದರೆ ಅಲ್ಲಾಹನ ಅಪ್ಪಣೆಯಿಲ್ಲದೆ ಯಾರಿಗೂ ಯಾವುದೇ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಸ್ವತಃ ಅವರಿಗೆ ತೊಂದರೆಯಾಗುವ ಮತ್ತು ಅವರಿಗೆ ಯಾವುದೇ ಪ್ರಯೋಜನ ನೀಡದ ವಿಷಯಗಳನ್ನು ಅವರು ಕಲಿಯುತ್ತಿದ್ದರು. ಅದನ್ನು ಪಡೆದವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲವೆಂದು ಅವರು ದೃಢವಾಗಿ ತಿಳಿದಿದ್ದರು. ಅವರು ಯಾವುದಕ್ಕೆ ತಮ್ಮ ಆತ್ಮಗಳನ್ನು ಮಾರಿಕೊಂಡರೋ ಅದು ಬಹಳ ನಿಕೃಷ್ಟವಾಗಿದೆ. ಅವರು ಅದನ್ನು ತಿಳಿದಿದ್ದರೆ (ಎಷ್ಟು ಚೆನ್ನಾಗಿತ್ತು)!