وَهُوَ ٱلَّذِىٓ أَنشَأَ جَنَّٰتٍ مَّعْرُوشَٰتٍ وَغَيْرَ مَعْرُوشَٰتٍ وَٱلنَّخْلَ وَٱلزَّرْعَ مُخْتَلِفًا أُكُلُهُۥ وَٱلزَّيْتُونَ وَٱلرُّمَّانَ مُتَشَٰبِهًا وَغَيْرَ مُتَشَٰبِهٍ كُلُوا۟ مِن ثَمَرِهِۦٓ إِذَآ أَثْمَرَ وَءَاتُوا۟ حَقَّهُۥ يَوْمَ حَصَادِهِۦ وَلَا تُسْرِفُوٓا۟ إِنَّهُۥ لَا يُحِبُّ ٱلْمُسْرِفِينَ
Kannada Translation - Hamza Buturಚಪ್ಪರಗಳಿರುವ ಮತ್ತು ಚಪ್ಪರಗಳಿಲ್ಲದ ತೋಟಗಳನ್ನು, ಖರ್ಜೂರದ ಮರಗಳನ್ನು, ವೈವಿಧ್ಯಮಯ ಫಲಗಳಿರುವ ಕೃಷಿಗಳನ್ನು, ಹೋಲಿಕೆಯಿರುವ ಮತ್ತು ಹೋಲಿಕೆಯಿಲ್ಲದ ಆಲಿವ್ ಮತ್ತು ದಾಳಿಂಬೆಗಳನ್ನು ಸೃಷ್ಟಿಸಿದ್ದು ಅವನೇ. ಅವು ಹಣ್ಣು ಬಿಟ್ಟರೆ ಅವುಗಳ ಹಣ್ಣುಗಳನ್ನು ತಿನ್ನಿರಿ ಮತ್ತು ಅವುಗಳನ್ನು ಕೊಯ್ಯುವ ದಿನದಂದು ಅವುಗಳ ಹಕ್ಕನ್ನು (ಝಕಾತನ್ನು) ನೀಡಿರಿ. ದುರ್ವ್ಯಯ ಮಾಡಬೇಡಿ. ನಿಶ್ಚಯವಾಗಿಯೂ ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.