هُوَ ٱلَّذِىٓ أَخْرَجَ ٱلَّذِينَ كَفَرُوا۟ مِنْ أَهْلِ ٱلْكِتَٰبِ مِن دِيَٰرِهِمْ لِأَوَّلِ ٱلْحَشْرِ مَا ظَنَنتُمْ أَن يَخْرُجُوا۟ وَظَنُّوٓا۟ أَنَّهُم مَّانِعَتُهُمْ حُصُونُهُم مِّنَ ٱللَّهِ فَأَتَىٰهُمُ ٱللَّهُ مِنْ حَيْثُ لَمْ يَحْتَسِبُوا۟ وَقَذَفَ فِى قُلُوبِهِمُ ٱلرُّعْبَ يُخْرِبُونَ بُيُوتَهُم بِأَيْدِيهِمْ وَأَيْدِى ٱلْمُؤْمِنِينَ فَٱعْتَبِرُوا۟ يَٰٓأُو۟لِى ٱلْأَبْصَٰرِ
Kannada Translation - Hamza Buturಅವನೇ ಪ್ರಥಮ ಗಡೀಪಾರಿನಲ್ಲಿ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳನ್ನು ಅವರ ಮನೆಗಳಿಂದ ಹೊರದಬ್ಬಿದವನು.[1] ಅವರು ಹೊರಹೋಗುವರೆಂದು ನೀವು ಊಹಿಸಿಯೂ ಇರಲಿಲ್ಲ. ಅವರ ಕೋಟೆಗಳು ಅವರನ್ನು ಅಲ್ಲಾಹನ ಶಿಕ್ಷೆಯಿಂದ ಕಾಪಾಡುತ್ತವೆ ಎಂದು ಅವರು ಭಾವಿಸಿದ್ದರು. ಆದರೆ ಅವರು ನಿರೀಕ್ಷಿಸಿಯೇ ಇರದ ಕಡೆಯಿಂದ ಅಲ್ಲಾಹನ ಶಿಕ್ಷೆಯು ಅವರ ಬಳಿಗೆ ಬಂತು. ಅಲ್ಲಾಹು ಅವರ ಹೃದಯದಲ್ಲಿ ಭೀತಿಯನ್ನು ಬಿತ್ತಿದನು. ಅವರು ಅವರ ಕೈಗಳಿಂದಲೇ ಅವರ ಮನೆಗಳನ್ನು ನಾಶ ಮಾಡುತ್ತಿದ್ದರು. ಸತ್ಯವಿಶ್ವಾಸಿಗಳ ಕೈಗಳು ಕೂಡ (ಅವುಗಳನ್ನು ನಾಶ ಮಾಡಿಸುತ್ತಿದ್ದವು). ಆದ್ದರಿಂದ ಓ ದೃಷ್ಟಿಯುಳ್ಳವರೇ, ಇದರಿಂದ ಪಾಠ ಕಲಿತುಕೊಳ್ಳಿರಿ.