caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Hadid, ಆಯತ್ 14

ಮದೀನಾ · ಅವತರಣ ಕ್ರಮ 94 · 57:14

يُنَادُونَهُمْ أَلَمْ نَكُن مَّعَكُمْ قَالُوا۟ بَلَىٰ وَلَٰكِنَّكُمْ فَتَنتُمْ أَنفُسَكُمْ وَتَرَبَّصْتُمْ وَٱرْتَبْتُمْ وَغَرَّتْكُمُ ٱلْأَمَانِىُّ حَتَّىٰ جَآءَ أَمْرُ ٱللَّهِ وَغَرَّكُم بِٱللَّهِ ٱلْغَرُورُ

Kannada Translation - Hamza Buturಕಪಟವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಕೂಗಿ ಕರೆಯುತ್ತಾ ಕೇಳುವರು: “ನಾವು ನಿಮ್ಮ ಜೊತೆಯಲ್ಲಿರಲಿಲ್ಲವೇ?” ಅವರು ಉತ್ತರಿಸುವರು: “ಹೌದು! ಆದರೆ ನೀವು ನಿಮ್ಮನ್ನೇ ಕ್ಷೋಭೆಗೆ ತಳ್ಳಿದ್ದಿರಿ ಮತ್ತು (ನಮಗೆ ಅನಾಹುತ ಸಂಭವಿಸುವುದನ್ನು) ಕಾಯುತ್ತಿದ್ದಿರಿ. ನೀವು ಸಂಶಯಪಡುತ್ತಿದ್ದಿರಿ. ನಿಮ್ಮ ಹುಸಿ ವ್ಯಾಮೋಹಗಳು ನಿಮ್ಮನ್ನು ಮರುಳುಗೊಳಿಸಿದವು. ಎಲ್ಲಿಯವರೆಗೆಂದರೆ ಅಲ್ಲಾಹನ ಆಜ್ಞೆ ಬರುವವರೆಗೆ. ಆ ನಯವಂಚಕನು (ಶೈತಾನನು) ನಿಮ್ಮನ್ನು ಅಲ್ಲಾಹನ ವಿಷಯದಲ್ಲಿ ವಂಚಿಸಿಬಿಟ್ಟನು.
Looking for a topic? Try the meaning search — your question is scanned across all 6,236 verses.
ಭಾಷೆ — 70