مُّحَمَّدٌ رَّسُولُ ٱللَّهِ وَٱلَّذِينَ مَعَهُۥٓ أَشِدَّآءُ عَلَى ٱلْكُفَّارِ رُحَمَآءُ بَيْنَهُمْ تَرَىٰهُمْ رُكَّعًا سُجَّدًا يَبْتَغُونَ فَضْلًا مِّنَ ٱللَّهِ وَرِضْوَٰنًا سِيمَاهُمْ فِى وُجُوهِهِم مِّنْ أَثَرِ ٱلسُّجُودِ ذَٰلِكَ مَثَلُهُمْ فِى ٱلتَّوْرَىٰةِ وَمَثَلُهُمْ فِى ٱلْإِنجِيلِ كَزَرْعٍ أَخْرَجَ شَطْـَٔهُۥ فَـَٔازَرَهُۥ فَٱسْتَغْلَظَ فَٱسْتَوَىٰ عَلَىٰ سُوقِهِۦ يُعْجِبُ ٱلزُّرَّاعَ لِيَغِيظَ بِهِمُ ٱلْكُفَّارَ وَعَدَ ٱللَّهُ ٱلَّذِينَ ءَامَنُوا۟ وَعَمِلُوا۟ ٱلصَّٰلِحَٰتِ مِنْهُم مَّغْفِرَةً وَأَجْرًا عَظِيمًۢا
Kannada Translation - Hamza Buturಮುಹಮ್ಮದ್ ಅಲ್ಲಾಹನ ಸಂದೇಶವಾಹಕರು. ಅವರ ಜೊತೆಗಿರುವವರು ಸತ್ಯನಿಷೇಧಿಗಳೊಡನೆ ಕಠೋರವಾಗಿ ವರ್ತಿಸುವವರು ಮತ್ತು ತಮ್ಮೊಳಗೆ ಅಪಾರ ದಯೆಯುಳ್ಳವರಾಗಿದ್ದಾರೆ. ಅವರು ಅಲ್ಲಾಹನ ಔದಾರ್ಯ ಮತ್ತು ಸಂಪ್ರೀತಿಯನ್ನು ಹುಡುಕುತ್ತಾ ತಲೆಬಾಗುವುದನ್ನು ಮತ್ತು ಸಾಷ್ಟಾಂಗ ಮಾಡುವುದನ್ನು ನೀವು ಕಾಣುವಿರಿ. ಸಾಷ್ಟಾಂಗ ಮಾಡಿದ ಕಾರಣದಿಂದಾಗಿ ಅವರ ಮುಖಗಳಲ್ಲಿ ಅವರ ಗುರುತು ಇದೆ. ಇದು ತೌರಾತಿನಲ್ಲಿರುವ ಅವರ ವಿವರಣೆಯಾಗಿದೆ. ಇಂಜೀಲಿನಲ್ಲಿರುವ ಅವರ ವಿವರಣೆಯು ಒಂದು ಸಸ್ಯದಂತೆ. ಅದರ ಮೊಳಕೆಯನ್ನು ಹೊರತಂದಿತು. ನಂತರ ಅದಕ್ಕೆ ಪುಷ್ಠಿಯನ್ನು ನೀಡಿತು. ನಂತರ ಅದು ಬಲವನ್ನು ಪಡೆದು ರೈತರಿಗೆ ಸಂತೋಷವನ್ನು ನೀಡುವ ರೀತಿಯಲ್ಲಿ ಅದರ ಕಾಂಡದ ಮೇಲೆ ನೆಟ್ಟಗೆ ನಿಂತಿತು. ಅವರ ಮೂಲಕ ಅಲ್ಲಾಹು ಸತ್ಯನಿಷೇಧಿಗಳನ್ನು ರೇಗಿಸುವುದಕ್ಕಾಗಿ. ಅವರಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾಹು ಕ್ಷಮೆ ಮತ್ತು ಮಹಾ ಪ್ರತಿಫಲವನ್ನು ವಾಗ್ದಾನ ಮಾಡಿದ್ದಾನೆ.