وَمَا كَانَ لِنَبِىٍّ أَن يَغُلَّ وَمَن يَغْلُلْ يَأْتِ بِمَا غَلَّ يَوْمَ ٱلْقِيَٰمَةِ ثُمَّ تُوَفَّىٰ كُلُّ نَفْسٍ مَّا كَسَبَتْ وَهُمْ لَا يُظْلَمُونَ
Kannada Translation - Hamza Buturಪ್ರವಾದಿಯು ಮೋಸ ಮಾಡುವುದು ಅಸಂಭವ.[1] ಯಾರು ಮೋಸ ಮಾಡುತ್ತಾನೋ ಅವನು ಪುನರುತ್ಥಾನ ದಿನದಂದು ತಾನು ಮಾಡಿದ ಮೋಸದೊಂದಿಗೆ ಬರುತ್ತಾನೆ. ನಂತರ ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮದ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.