وَبَرَزُوا۟ لِلَّهِ جَمِيعًا فَقَالَ ٱلضُّعَفَٰٓؤُا۟ لِلَّذِينَ ٱسْتَكْبَرُوٓا۟ إِنَّا كُنَّا لَكُمْ تَبَعًا فَهَلْ أَنتُم مُّغْنُونَ عَنَّا مِنْ عَذَابِ ٱللَّهِ مِن شَىْءٍ قَالُوا۟ لَوْ هَدَىٰنَا ٱللَّهُ لَهَدَيْنَٰكُمْ سَوَآءٌ عَلَيْنَآ أَجَزِعْنَآ أَمْ صَبَرْنَا مَا لَنَا مِن مَّحِيصٍ
Kannada Translation - Hamza Buturಅವರೆಲ್ಲರೂ ಅಲ್ಲಾಹನ ಬಳಿಗೆ ಹೊರಟು ಬರುವರು. ಆಗ ಬಲಹೀನರು ಅಹಂಕಾರಿಗಳೊಂದಿಗೆ ಹೇಳುವರು: “ನಾವು ನಿಜಕ್ಕೂ ನಿಮ್ಮ ಹಿಂಬಾಲಕರಾಗಿದ್ದೆವು. ಈಗ ಅಲ್ಲಾಹನ ಶಿಕ್ಷೆಯಿಂದ ಒಂದಂಶವನ್ನಾದರೂ ನಮ್ಮಿಂದ ದೂರ ಮಾಡುವಿರಾ?” ಅವರು ಉತ್ತರಿಸುವರು: “ಅಲ್ಲಾಹು ನಮಗೆ ಸನ್ಮಾರ್ಗ ತೋರಿಸುತ್ತಿದ್ದರೆ ನಾವು ನಿಮಗೂ ಸನ್ಮಾರ್ಗ ತೋರಿಸುತ್ತಿದ್ದೆವು. ಈಗ ನಾವು ಸಹನೆ ಕಳೆದುಕೊಂಡರೂ ಸಹನೆಯಿಂದ ವರ್ತಿಸಿದರೂ ಯಾವುದೇ ವ್ಯತ್ಯಾಸವಿಲ್ಲ. ನಮಗೆ ಯಾವುದೇ ರಕ್ಷಾಮಾರ್ಗವಿಲ್ಲ.”