قُلْ هَلْ مِن شُرَكَآئِكُم مَّن يَهْدِىٓ إِلَى ٱلْحَقِّ قُلِ ٱللَّهُ يَهْدِى لِلْحَقِّ أَفَمَن يَهْدِىٓ إِلَى ٱلْحَقِّ أَحَقُّ أَن يُتَّبَعَ أَمَّن لَّا يَهِدِّىٓ إِلَّآ أَن يُهْدَىٰ فَمَا لَكُمْ كَيْفَ تَحْكُمُونَ
Kannada Translation - Hamza Buturಕೇಳಿರಿ: “ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಸತ್ಯಮಾರ್ಗವನ್ನು ತೋರಿಸುವವರು ಯಾರಾದರೂ ಇದ್ದಾರೆಯೇ?” ಹೇಳಿರಿ: “ಅಲ್ಲಾಹು ಸತ್ಯಮಾರ್ಗವನ್ನು ತೋರಿಸುತ್ತಾನೆ. ಹಾಗಾದರೆ, ಅನುಸರಿಸಲು ಹೆಚ್ಚು ಹಕ್ಕಿರುವವನು ಸತ್ಯಮಾರ್ಗವನ್ನು ತೋರಿಸುವವನೋ ಅಥವಾ ಬೇರೆ ಯಾರಾದರೂ ಸತ್ಯಮಾರ್ಗವನ್ನು ತೋರಿಸಿದ ವಿನಾ ಸ್ವಯಂ ಸತ್ಯಮಾರ್ಗವನ್ನು ಕಾಣಲು ಸಾಧ್ಯವಾಗದವನೋ? ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ?”