caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-A'raaf, ಆಯತ್ 160

ಮಕ್ಕಾ · ಅವತರಣ ಕ್ರಮ 39 · 7:160

وَقَطَّعْنَٰهُمُ ٱثْنَتَىْ عَشْرَةَ أَسْبَاطًا أُمَمًا وَأَوْحَيْنَآ إِلَىٰ مُوسَىٰٓ إِذِ ٱسْتَسْقَىٰهُ قَوْمُهُۥٓ أَنِ ٱضْرِب بِّعَصَاكَ ٱلْحَجَرَ فَٱنۢبَجَسَتْ مِنْهُ ٱثْنَتَا عَشْرَةَ عَيْنًا قَدْ عَلِمَ كُلُّ أُنَاسٍ مَّشْرَبَهُمْ وَظَلَّلْنَا عَلَيْهِمُ ٱلْغَمَٰمَ وَأَنزَلْنَا عَلَيْهِمُ ٱلْمَنَّ وَٱلسَّلْوَىٰ كُلُوا۟ مِن طَيِّبَٰتِ مَا رَزَقْنَٰكُمْ وَمَا ظَلَمُونَا وَلَٰكِن كَانُوٓا۟ أَنفُسَهُمْ يَظْلِمُونَ

Kannada Translation - Hamza Buturನಾವು ಅವರನ್ನು ಹನ್ನೆರಡು ವಂಶಗಳ ಗೋತ್ರಗಳನ್ನಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನರು ನೀರಿಗಾಗಿ ಅಂಗಲಾಚಿದಾಗ, “ನಿಮ್ಮ ಕೋಲಿನಿಂದ ಆ ಬಂಡೆಗೆ ಬಡಿಯಿರಿ” ಎಂದು ನಾವು ಅವರಿಗೆ ದೇವವಾಣಿ ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಜನರೆಲ್ಲರೂ ತಮ್ಮ ತಮ್ಮ ನೀರು ಕುಡಿಯುವ ಸ್ಥಳವನ್ನು ತಿಳಿದುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು. ಅವರಿಗೆ ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು. “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ” (ಎಂದು ನಾವು ಹೇಳಿದೆವು). ಅವರು ನಮ್ಮೊಂದಿಗೆ ಅನ್ಯಾಯ ಮಾಡಿಲ್ಲ; ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದರು.
Looking for a topic? Try the meaning search — your question is scanned across all 6,236 verses.
ಭಾಷೆ — 70