أَوْ تَقُولُوا۟ لَوْ أَنَّآ أُنزِلَ عَلَيْنَا ٱلْكِتَٰبُ لَكُنَّآ أَهْدَىٰ مِنْهُمْ فَقَدْ جَآءَكُم بَيِّنَةٌ مِّن رَّبِّكُمْ وَهُدًى وَرَحْمَةٌ فَمَنْ أَظْلَمُ مِمَّن كَذَّبَ بِـَٔايَٰتِ ٱللَّهِ وَصَدَفَ عَنْهَا سَنَجْزِى ٱلَّذِينَ يَصْدِفُونَ عَنْ ءَايَٰتِنَا سُوٓءَ ٱلْعَذَابِ بِمَا كَانُوا۟ يَصْدِفُونَ
Kannada Translation - Hamza Buturಅಥವಾ, “ನಮಗೊಂದು ಗ್ರಂಥವು ಅವತೀರ್ಣವಾಗುತ್ತಿದ್ದರೆ ನಾವು ಅವರಿಗಿಂತಲೂ ಹೆಚ್ಚು ಸನ್ಮಾರ್ಗ ಪಡೆಯುತ್ತಿದ್ದೆವು” ಎಂದು ನೀವು ಹೇಳಬಾರದೆಂದು (ಈ ಗ್ರಂಥವನ್ನು ಅವತೀರ್ಣಗೊಳಿಸಲಾಗಿದೆ). ಈಗ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರ, ಮಾರ್ಗದರ್ಶನ ಮತ್ತು ದಯೆಯು ಬಂದಿದೆ. ಇದರ ಬಳಿಕವೂ ಅಲ್ಲಾಹನ ವಚನಗಳನ್ನು ನಿಷೇಧಿಸುವವನಿಗಿಂತ ಮತ್ತು ಅದರಿಂದ ವಿಮುಖನಾಗುವವನಿಗಿಂತ ದೊಡ್ಡ ಅಕ್ರಮಿ ಯಾರು? ನಮ್ಮ ವಚನಗಳಿಂದ ವಿಮುಖರಾಗುವವರು ಯಾರೋ—ಅವರು ವಿಮುಖರಾದ ಕಾರಣ ನಾವು ಅವರಿಗೆ ಅತಿ ಹೀನ ಶಿಕ್ಷೆಯನ್ನು ನೀಡುವೆವು.