وَقَالُوا۟ هَٰذِهِۦٓ أَنْعَٰمٌ وَحَرْثٌ حِجْرٌ لَّا يَطْعَمُهَآ إِلَّا مَن نَّشَآءُ بِزَعْمِهِمْ وَأَنْعَٰمٌ حُرِّمَتْ ظُهُورُهَا وَأَنْعَٰمٌ لَّا يَذْكُرُونَ ٱسْمَ ٱللَّهِ عَلَيْهَا ٱفْتِرَآءً عَلَيْهِ سَيَجْزِيهِم بِمَا كَانُوا۟ يَفْتَرُونَ
Kannada Translation - Hamza Buturಅವರು ಹೇಳುತ್ತಾರೆ: “ಈ ಜಾನುವಾರುಗಳು ಮತ್ತು ಕೃಷಿಗಳನ್ನು ನಿಷೇಧಿಸಲಾಗಿದೆ. ನಾವು ಇಚ್ಛಿಸುವವರ ಹೊರತು ಯಾರೂ ಇವುಗಳನ್ನು ತಿನ್ನಬಾರದು.” ಇದು ಅವರ ದಾವೆಯಾಗಿದೆ. “ಕೆಲವು ಜಾನುವಾರುಗಳ ಬೆನ್ನ ಮೇಲೆ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ ಮತ್ತು ಕೆಲವು ಜಾನುವಾರುಗಳನ್ನು ಕೊಯ್ಯುವಾಗ ಅಲ್ಲಾಹನ ಹೆಸರನ್ನು ಉಚ್ಛರಿಸಬೇಕಾಗಿಲ್ಲ” (ಎಂದು ಅವರು ಹೇಳುತ್ತಾರೆ) ಇವೆಲ್ಲವೂ ಅವರು ಅಲ್ಲಾಹನ ಬಗ್ಗೆ ಆರೋಪಿಸುವ ಸುಳ್ಳುಗಳಾಗಿವೆ. ಅವನು ಅವರ ಆರೋಪಗಳಿಗೆ ತಕ್ಕ ಪ್ರತಿಫಲವನ್ನು ನೀಡುವನು.