caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Hashr, ಆಯತ್ 9

ಮದೀನಾ · ಅವತರಣ ಕ್ರಮ 101 · 59:9

وَٱلَّذِينَ تَبَوَّءُو ٱلدَّارَ وَٱلْإِيمَٰنَ مِن قَبْلِهِمْ يُحِبُّونَ مَنْ هَاجَرَ إِلَيْهِمْ وَلَا يَجِدُونَ فِى صُدُورِهِمْ حَاجَةً مِّمَّآ أُوتُوا۟ وَيُؤْثِرُونَ عَلَىٰٓ أَنفُسِهِمْ وَلَوْ كَانَ بِهِمْ خَصَاصَةٌ وَمَن يُوقَ شُحَّ نَفْسِهِۦ فَأُو۟لَٰٓئِكَ هُمُ ٱلْمُفْلِحُونَ

Kannada Translation - Hamza Buturಅವರಿಗಿಂತ ಮೊದಲೇ ಆ ಮನೆಯಲ್ಲಿ (ಮದೀನದಲ್ಲಿ) ಮತ್ತು ಸತ್ಯವಿಶ್ವಾಸದಲ್ಲಿ ವಾಸ್ತವ್ಯವನ್ನು ಸಿದ್ಧಗೊಳಿಸಿದವರಿಗೂ (ಇರುವುದಾಗಿದೆ). ಅವರು ತಮ್ಮ ಬಳಿಗೆ ವಲಸೆ (ಹಿಜ್ರ) ಮಾಡಿದವರನ್ನು ಪ್ರೀತಿಸುತ್ತಾರೆ.[1] ಮುಹಾಜಿರರಿಗೆ ಏನು ಕೊಡಲಾಗುತ್ತದೋ ಅದರ ಬಗ್ಗೆ ಇವರಿಗೆ ಇವರ ಹೃದಯದಲ್ಲಿ ಯಾವುದೇ ಅಸಮಾಧಾನವು ಉಂಟಾಗುವುದಿಲ್ಲ. ತಮಗೆ ಎಷ್ಟೇ ಅಗತ್ಯವಿದ್ದರೂ ಸಹ ಇವರು ಅವರಿಗೆ ಆದ್ಯತೆಯನ್ನು ನೀಡುತ್ತಾರೆ. ಯಾರನ್ನು ಅವರ ಮನಸ್ಸಿನ ಜಿಪುಣತನದಿಂದ ರಕ್ಷಿಸಲಾಗಿದೆಯೋ ಅವರೇ ಯಶಸ್ವಿಯಾದವರು.
Looking for a topic? Try the meaning search — your question is scanned across all 6,236 verses.
ಭಾಷೆ — 70