caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Mujaadila, ಆಯತ್ 8

ಮದೀನಾ · ಅವತರಣ ಕ್ರಮ 105 · 58:8

أَلَمْ تَرَ إِلَى ٱلَّذِينَ نُهُوا۟ عَنِ ٱلنَّجْوَىٰ ثُمَّ يَعُودُونَ لِمَا نُهُوا۟ عَنْهُ وَيَتَنَٰجَوْنَ بِٱلْإِثْمِ وَٱلْعُدْوَٰنِ وَمَعْصِيَتِ ٱلرَّسُولِ وَإِذَا جَآءُوكَ حَيَّوْكَ بِمَا لَمْ يُحَيِّكَ بِهِ ٱللَّهُ وَيَقُولُونَ فِىٓ أَنفُسِهِمْ لَوْلَا يُعَذِّبُنَا ٱللَّهُ بِمَا نَقُولُ حَسْبُهُمْ جَهَنَّمُ يَصْلَوْنَهَا فَبِئْسَ ٱلْمَصِيرُ

Kannada Translation - Hamza Buturರಹಸ್ಯ ಮಾತುಕತೆ ನಡೆಸುವುದನ್ನು ವಿರೋಧಿಸಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರಿಗೆ ವಿರೋಧಿಸಲಾದ ಕೆಲಸವನ್ನೇ ಅವರು ಮಾಡುತ್ತಾರೆ. ಅವರು ಪರಸ್ಪರ ಪಾಪ, ಅತಿರೇಕ ಮತ್ತು ಪ್ರವಾದಿಯನ್ನು ಧಿಕ್ಕರಿಸುವ ಕೆಲಸಗಳಿಗಾಗಿ ರಹಸ್ಯ ಮಾತುಕತೆ ಮಾಡುತ್ತಾರೆ. ಅವರು ನಿಮ್ಮ ಬಳಿಗೆ ಬಂದರೆ ಅಲ್ಲಾಹು ನಿಮಗೆ ಸಲಾಂ ಹೇಳಲು ಬಳಸದ ಪದಗಳೊಂದಿಗೆ ಅವರು ನಿಮಗೆ ಸಲಾಂ ಹೇಳುತ್ತಾರೆ.[1] “ನಾವು ಹೇಳುವ ಈ ಮಾತುಗಳಿಗಾಗಿ ಅಲ್ಲಾಹು ನಮ್ಮನ್ನೇಕೆ ಶಿಕ್ಷಿಸುವುದಿಲ್ಲ?” ಎಂದು ಅವರು ಮನಸ್ಸಿನಲ್ಲೇ ಕೇಳುತ್ತಾರೆ.[2] ಅವರಿಗೆ ನರಕಾಗ್ನಿಯೇ ಸಾಕು. ಅವರು ಅದರಲ್ಲಿ ಉರಿಯುವರು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ.
Looking for a topic? Try the meaning search — your question is scanned across all 6,236 verses.
ಭಾಷೆ — 70