وَٱعْلَمُوٓا۟ أَنَّ فِيكُمْ رَسُولَ ٱللَّهِ لَوْ يُطِيعُكُمْ فِى كَثِيرٍ مِّنَ ٱلْأَمْرِ لَعَنِتُّمْ وَلَٰكِنَّ ٱللَّهَ حَبَّبَ إِلَيْكُمُ ٱلْإِيمَٰنَ وَزَيَّنَهُۥ فِى قُلُوبِكُمْ وَكَرَّهَ إِلَيْكُمُ ٱلْكُفْرَ وَٱلْفُسُوقَ وَٱلْعِصْيَانَ أُو۟لَٰٓئِكَ هُمُ ٱلرَّٰشِدُونَ
Kannada Translation - Hamza Buturತಿಳಿಯಿರಿ! ನಿಮ್ಮೊಡನೆ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ. ಹೆಚ್ಚಿನ ವಿಷಯಗಳಲ್ಲಿ ಅವರು ನಿಮ್ಮ ಮಾತನ್ನು ಕೇಳುತ್ತಿದ್ದರೆ ನೀವು ಕಷ್ಟಪಡುತ್ತಿದ್ದಿರಿ. ಆದರೆ ಅಲ್ಲಾಹು ನಿಮಗೆ ಸತ್ಯವಿಶ್ವಾಸವನ್ನು ಇಷ್ಟವಾಗುವಂತೆ ಮಾಡಿದನು ಮತ್ತು ನಿಮ್ಮ ಹೃದಯಗಳಲ್ಲಿ ಅದನ್ನು ಅಂದಗೊಳಿಸಿಕೊಟ್ಟನು. ನಿಮಗೆ ಸತ್ಯನಿಷೇಧ, ದುಷ್ಕರ್ಮ ಮತ್ತು ಆಜ್ಞೆೋಲ್ಲಂಘನೆಯನ್ನು ಅಸಹ್ಯವಾಗುವಂತೆ ಮಾಡಿದನು. ಅವರೇ ಸನ್ಮಾರ್ಗ ಪಡೆದವರು.