يَٰٓأَيُّهَا ٱلَّذِينَ ءَامَنُوا۟ لَا يَحِلُّ لَكُمْ أَن تَرِثُوا۟ ٱلنِّسَآءَ كَرْهًا وَلَا تَعْضُلُوهُنَّ لِتَذْهَبُوا۟ بِبَعْضِ مَآ ءَاتَيْتُمُوهُنَّ إِلَّآ أَن يَأْتِينَ بِفَٰحِشَةٍ مُّبَيِّنَةٍ وَعَاشِرُوهُنَّ بِٱلْمَعْرُوفِ فَإِن كَرِهْتُمُوهُنَّ فَعَسَىٰٓ أَن تَكْرَهُوا۟ شَيْـًٔا وَيَجْعَلَ ٱللَّهُ فِيهِ خَيْرًا كَثِيرًا
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ಮಹಿಳೆಯರನ್ನು ಬಲವಂತದಿಂದ ಉತ್ತರಾಧಿಕಾರವಾಗಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ.[1] ನೀವು ಅವರಿಗೆ (ಪತ್ನಿಯರಿಗೆ) ನೀಡಿರುವುದರಲ್ಲಿ ಒಂದಂಶವನ್ನು ಹಿಂದಕ್ಕೆ ಪಡೆಯಲು ಅವರನ್ನು ತಡೆದಿರಿಸಬೇಡಿ— ಅವರು ಬಹಿರಂಗವಾಗಿ ಏನಾದರೂ ಅಶ್ಲೀಲ ಕೃತ್ಯವೆಸಗದಿದ್ದರೆ. ಅವರೊಂದಿಗೆ ಉತ್ತಮವಾಗಿ ವರ್ತಿಸಿರಿ. ನೀವು ಅವರನ್ನು ದ್ವೇಷಿಸುವುದಾದರೆ, ಬಹುಶಃ ನೀವು ದ್ವೇಷಿಸುವ ಒಂದು ವಸ್ತುವಿನಲ್ಲಿ ಅಲ್ಲಾಹು ಅತ್ಯಧಿಕ ಒಳಿತನ್ನಿಟ್ಟಿರಬಹುದು.