لَّقَدْ سَمِعَ ٱللَّهُ قَوْلَ ٱلَّذِينَ قَالُوٓا۟ إِنَّ ٱللَّهَ فَقِيرٌ وَنَحْنُ أَغْنِيَآءُ سَنَكْتُبُ مَا قَالُوا۟ وَقَتْلَهُمُ ٱلْأَنۢبِيَآءَ بِغَيْرِ حَقٍّ وَنَقُولُ ذُوقُوا۟ عَذَابَ ٱلْحَرِيقِ
Kannada Translation - Hamza Buturಅಲ್ಲಾಹು ಬಡವನು ಮತ್ತು ನಾವು ಶ್ರೀಮಂತರು ಎಂದು ಹೇಳಿದವರ (ಯಹೂದಿಗಳ) ಮಾತನ್ನು ಅಲ್ಲಾಹು ಖಂಡಿತ ಕೇಳಿದ್ದಾನೆ.[1] ಅವರು ಹೇಳಿದ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದನ್ನು ನಾವು ದಾಖಲಿಸಿಡುತ್ತೇವೆ. ಉರಿಯುವ ನರಕ ಶಿಕ್ಷೆಯ ರುಚಿಯನ್ನು ನೋಡಿರಿ ಎಂದು ನಾವು ಅವರೊಡನೆ ಹೇಳುವೆವು.