caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Noor, ಆಯತ್ 55

ಮದೀನಾ · ಅವತರಣ ಕ್ರಮ 102 · 24:55

وَعَدَ ٱللَّهُ ٱلَّذِينَ ءَامَنُوا۟ مِنكُمْ وَعَمِلُوا۟ ٱلصَّٰلِحَٰتِ لَيَسْتَخْلِفَنَّهُمْ فِى ٱلْأَرْضِ كَمَا ٱسْتَخْلَفَ ٱلَّذِينَ مِن قَبْلِهِمْ وَلَيُمَكِّنَنَّ لَهُمْ دِينَهُمُ ٱلَّذِى ٱرْتَضَىٰ لَهُمْ وَلَيُبَدِّلَنَّهُم مِّنۢ بَعْدِ خَوْفِهِمْ أَمْنًا يَعْبُدُونَنِى لَا يُشْرِكُونَ بِى شَيْـًٔا وَمَن كَفَرَ بَعْدَ ذَٰلِكَ فَأُو۟لَٰٓئِكَ هُمُ ٱلْفَٰسِقُونَ

Kannada Translation - Hamza Buturಅಲ್ಲಾಹು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ, ಅವರಿಗಿಂತ ಮೊದಲಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯ ನೀಡಿದಂತೆ ಅವರಿಗೂ ಖಂಡಿತ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮವನ್ನು (ಭೂಮಿಯಲ್ಲಿ) ಪ್ರಬಲವಾಗಿ ಸ್ಥಾಪಿಸುವನು ಮತ್ತು ಅವರು ಅನುಭವಿಸುತ್ತಿರುವ ಭಯವನ್ನು ನಿರ್ಭಯವಾಗಿ ಬದಲಾಯಿಸುವನೆಂದು ವಾಗ್ದಾನ ಮಾಡಿದ್ದಾನೆ. ಅವರು ನನ್ನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ. ಯಾರು ಅದರ ಬಳಿಕವೂ ಸತ್ಯವನ್ನು ನಿಷೇಧಿಸುತ್ತಾರೋ ಅವರೇ ನಿಜವಾದ ದುಷ್ಕರ್ಮಿಗಳು.
Looking for a topic? Try the meaning search — your question is scanned across all 6,236 verses.
ಭಾಷೆ — 70