قُلْ أَطِيعُوا۟ ٱللَّهَ وَأَطِيعُوا۟ ٱلرَّسُولَ فَإِن تَوَلَّوْا۟ فَإِنَّمَا عَلَيْهِ مَا حُمِّلَ وَعَلَيْكُم مَّا حُمِّلْتُمْ وَإِن تُطِيعُوهُ تَهْتَدُوا۟ وَمَا عَلَى ٱلرَّسُولِ إِلَّا ٱلْبَلَٰغُ ٱلْمُبِينُ
Kannada Translation - Hamza Buturಹೇಳಿರಿ: “ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವೇನಾದರೂ ಮುಖ ತಿರುಗಿಸಿ ನಡೆದರೆ, ಅವರ (ಪ್ರವಾದಿಯ) ಹೊಣೆಯು ಅವರಿಗೆ ವಹಿಸಿದ ವಿಷಯಗಳು ಮಾತ್ರ. ನಿಮ್ಮ ಹೊಣೆಯು ನಿಮಗೆ ವಹಿಸಿದ ವಿಷಯಗಳು ಮಾತ್ರ. ನೀವು ಅವರ ಆಜ್ಞಾಪಾಲನೆ ಮಾಡಿದರೆ ಸನ್ಮಾರ್ಗವನ್ನು ಪಡೆಯುತ್ತೀರಿ. ಸಂದೇಶವಾಹಕರ ಹೊಣೆಯು (ಸಂದೇಶವನ್ನು) ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರ.”