وَٱللَّهُ فَضَّلَ بَعْضَكُمْ عَلَىٰ بَعْضٍ فِى ٱلرِّزْقِ فَمَا ٱلَّذِينَ فُضِّلُوا۟ بِرَآدِّى رِزْقِهِمْ عَلَىٰ مَا مَلَكَتْ أَيْمَٰنُهُمْ فَهُمْ فِيهِ سَوَآءٌ أَفَبِنِعْمَةِ ٱللَّهِ يَجْحَدُونَ
Kannada Translation - Hamza Buturಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತಲೂ ಹೆಚ್ಚು ಉಪಜೀವನವನ್ನು ನೀಡಿದ್ದಾನೆ. ಹೆಚ್ಚು ಉಪಜೀವನ ನೀಡಲಾದವರು ಅದನ್ನು ತಮ್ಮ ಅಧೀನದಲ್ಲಿರುವ ಗುಲಾಮರಿಗೆ ನೀಡಿ ಅದರಲ್ಲಿ ಇಬ್ಬರೂ (ಗುಲಾಮ ಮತ್ತು ಯಜಮಾನ) ಸಮಾನರಾಗುವಂತೆ ಮಾಡಿಕೊಳ್ಳುವುದಿಲ್ಲ.[1] ಹಾಗಿದ್ದೂ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸುತ್ತಾರೆಯೇ?