أَلَمْ يَأْتِكُمْ نَبَؤُا۟ ٱلَّذِينَ مِن قَبْلِكُمْ قَوْمِ نُوحٍ وَعَادٍ وَثَمُودَ وَٱلَّذِينَ مِنۢ بَعْدِهِمْ لَا يَعْلَمُهُمْ إِلَّا ٱللَّهُ جَآءَتْهُمْ رُسُلُهُم بِٱلْبَيِّنَٰتِ فَرَدُّوٓا۟ أَيْدِيَهُمْ فِىٓ أَفْوَٰهِهِمْ وَقَالُوٓا۟ إِنَّا كَفَرْنَا بِمَآ أُرْسِلْتُم بِهِۦ وَإِنَّا لَفِى شَكٍّ مِّمَّا تَدْعُونَنَآ إِلَيْهِ مُرِيبٍ
Kannada Translation - Hamza Buturನಿಮಗಿಂತ ಮೊದಲಿನ ನೂಹರ ಜನರು, ಆದ್ ಮತ್ತು ಸಮೂದ್ ಗೋತ್ರಗಳು ಹಾಗೂ ಅವರ ನಂತರ ಬಂದ—ಅಲ್ಲಾಹನ ಹೊರತು ಬೇರೆ ಯಾರೂ ತಿಳಿದಿರದ ಗೋತ್ರಗಳು—ಮುಂತಾದವರ ಸಮಾಚಾರಗಳು ನಿಮಗೆ ತಲುಪಿಲ್ಲವೇ? ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆಗ ಅವರು ತಮ್ಮ ಕೈಯನ್ನು ಬಾಯಿಗೆ ಒತ್ತಿ ಹಿಡಿದು ಹೇಳಿದರು: “ಯಾವ ಸಂದೇಶದೊಂದಿಗೆ ನಿಮ್ಮನ್ನು ಕಳುಹಿಸಲಾಗಿದೆಯೋ ಅದನ್ನು ನಾವು ಸಂಪೂರ್ಣವಾಗಿ ನಿಷೇಧಿಸಿದ್ದೇವೆ. ನೀವು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿದ್ದೀರೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.”