وَدَخَلَ مَعَهُ ٱلسِّجْنَ فَتَيَانِ قَالَ أَحَدُهُمَآ إِنِّىٓ أَرَىٰنِىٓ أَعْصِرُ خَمْرًا وَقَالَ ٱلْـَٔاخَرُ إِنِّىٓ أَرَىٰنِىٓ أَحْمِلُ فَوْقَ رَأْسِى خُبْزًا تَأْكُلُ ٱلطَّيْرُ مِنْهُ نَبِّئْنَا بِتَأْوِيلِهِۦٓ إِنَّا نَرَىٰكَ مِنَ ٱلْمُحْسِنِينَ
Kannada Translation - Hamza Buturಯೂಸುಫರೊಂದಿಗೆ ಇಬ್ಬರು ಯುವಕರು ಕೂಡ ಕಾರಾಗೃಹಕ್ಕೆ ಪ್ರವೇಶ ಮಾಡಿದರು. ಅವರಲ್ಲೊಬ್ಬನು ಹೇಳಿದನು: “ನಾನು ಮದ್ಯ (ದ್ರಾಕ್ಷಾರಸ) ಹಿಂಡುತ್ತಿರುವಂತೆ ನನಗೆ ಕನಸು ಬಿದ್ದಿದೆ.” ಇನ್ನೊಬ್ಬನು ಹೇಳಿದನು: “ನಾನು ನನ್ನ ತಲೆಯ ಮೇಲೆ ರೊಟ್ಟಿಯನ್ನು ಒಯ್ಯುತ್ತಿರುವಂತೆ ನನಗೆ ಕನಸು ಬಿದ್ದಿದೆ. ಹಕ್ಕಿಗಳು ಅದನ್ನು ಕುಕ್ಕಿ ತಿನ್ನುತ್ತಿದ್ದವು. ಇದರ ಅರ್ಥವೇನೆಂದು ನಮಗೆ ತಿಳಿಸಿಕೊಡಿ. ನಿಶ್ಚಯವಾಗಿಯೂ ನಾವು ನಿಮ್ಮನ್ನು ಸಜ್ಜನರಂತೆ ಕಾಣುತ್ತಿದ್ದೇವೆ.”