ثُمَّ بَعَثْنَا مِنۢ بَعْدِهِۦ رُسُلًا إِلَىٰ قَوْمِهِمْ فَجَآءُوهُم بِٱلْبَيِّنَٰتِ فَمَا كَانُوا۟ لِيُؤْمِنُوا۟ بِمَا كَذَّبُوا۟ بِهِۦ مِن قَبْلُ كَذَٰلِكَ نَطْبَعُ عَلَىٰ قُلُوبِ ٱلْمُعْتَدِينَ
Kannada Translation - Hamza Buturನಂತರ, ಅವರ ಬಳಿಕ ನಾವು ಆಯಾ ಸಮುದಾಯಗಳಿಗೆ ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದೆವು. ಆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆದರೂ, ಇದಕ್ಕೆ ಮೊದಲು ಅವರು ನಿಷೇಧಿಸಿದ ಆ ಸಂಗತಿಯಲ್ಲಿ ವಿಶ್ವಾಸವಿಡಲು ಅವರು ಸಿದ್ಧರಾಗಲಿಲ್ಲ. ಈ ರೀತಿ ನಾವು ಅತಿರೇಕಿಗಳ ಹೃದಯಗಳಿಗೆ ಮೊಹರು ಹಾಕುತ್ತೇವೆ.