وَعَدَ ٱللَّهُ ٱلْمُؤْمِنِينَ وَٱلْمُؤْمِنَٰتِ جَنَّٰتٍ تَجْرِى مِن تَحْتِهَا ٱلْأَنْهَٰرُ خَٰلِدِينَ فِيهَا وَمَسَٰكِنَ طَيِّبَةً فِى جَنَّٰتِ عَدْنٍ وَرِضْوَٰنٌ مِّنَ ٱللَّهِ أَكْبَرُ ذَٰلِكَ هُوَ ٱلْفَوْزُ ٱلْعَظِيمُ
Kannada Translation - Hamza Buturಅಲ್ಲಾಹು ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳ ಭರವಸೆ ನೀಡಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುತ್ತಾರೆ. ಚಿರಸ್ಥಾಯಿಯಾದ ಉದ್ಯಾನಗಳಲ್ಲಿರುವ ಮನಮೋಹಕ ವಸತಿಗಳ ಭರವಸೆಯನ್ನೂ ನೀಡಿದ್ದಾನೆ. ಆದರೆ ಅಲ್ಲಾಹನ ಸಂಪ್ರೀತಿಯೇ ಎಲ್ಲಕ್ಕಿಂತಲೂ ದೊಡ್ಡದು. ಅದೇ ಅತಿದೊಡ್ಡ ಯಶಸ್ಸು.