إِنَّمَا ٱلنَّسِىٓءُ زِيَادَةٌ فِى ٱلْكُفْرِ يُضَلُّ بِهِ ٱلَّذِينَ كَفَرُوا۟ يُحِلُّونَهُۥ عَامًا وَيُحَرِّمُونَهُۥ عَامًا لِّيُوَاطِـُٔوا۟ عِدَّةَ مَا حَرَّمَ ٱللَّهُ فَيُحِلُّوا۟ مَا حَرَّمَ ٱللَّهُ زُيِّنَ لَهُمْ سُوٓءُ أَعْمَٰلِهِمْ وَٱللَّهُ لَا يَهْدِى ٱلْقَوْمَ ٱلْكَٰفِرِينَ
Kannada Translation - Hamza Buturನಿಶ್ಚಯವಾಗಿಯೂ ನಸೀ (ಪವಿತ್ರ ತಿಂಗಳುಗಳನ್ನು ಹಿಂದೆ-ಮುಂದೆ ಮಾಡುವುದು) ಸತ್ಯನಿಷೇಧದಲ್ಲಿರುವ ಹೆಚ್ಚಳವಾಗಿದೆ. ಇದರಿಂದ ಸತ್ಯನಿಷೇಧಿಗಳನ್ನು ಇನ್ನೂ ಹೆಚ್ಚು ದಾರಿತಪ್ಪಿಸಲಾಗುತ್ತಿದೆ. ಒಂದು ವರ್ಷ ಅವರು ಅದನ್ನು (ಪವಿತ್ರ ತಿಂಗಳನ್ನು) ಪವಿತ್ರವಲ್ಲ ಎನ್ನುತ್ತಾರೆ ಮತ್ತು ಇನ್ನೊಂದು ವರ್ಷ ಪವಿತ್ರ ಎನ್ನುತ್ತಾರೆ. ಹೀಗೆ ಅವರು ಅಲ್ಲಾಹು ಪವಿತ್ರಗೊಳಿಸಿದ ತಿಂಗಳುಗಳ ಸಂಖ್ಯೆಯನ್ನು ಸರಿಹೊಂದಿಸಿ ಅಲ್ಲಾಹು ನಿಷೇಧಿಸಿದ್ದನ್ನು ಅನುಮತಿಸುತ್ತಾರೆ.[1] ಅವರ ದುಷ್ಕರ್ಮಗಳನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.