caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Mumtahana, ಆಯತ್ 10

ಮದೀನಾ · ಅವತರಣ ಕ್ರಮ 91 · 60:10

يَٰٓأَيُّهَا ٱلَّذِينَ ءَامَنُوٓا۟ إِذَا جَآءَكُمُ ٱلْمُؤْمِنَٰتُ مُهَٰجِرَٰتٍ فَٱمْتَحِنُوهُنَّ ٱللَّهُ أَعْلَمُ بِإِيمَٰنِهِنَّ فَإِنْ عَلِمْتُمُوهُنَّ مُؤْمِنَٰتٍ فَلَا تَرْجِعُوهُنَّ إِلَى ٱلْكُفَّارِ لَا هُنَّ حِلٌّ لَّهُمْ وَلَا هُمْ يَحِلُّونَ لَهُنَّ وَءَاتُوهُم مَّآ أَنفَقُوا۟ وَلَا جُنَاحَ عَلَيْكُمْ أَن تَنكِحُوهُنَّ إِذَآ ءَاتَيْتُمُوهُنَّ أُجُورَهُنَّ وَلَا تُمْسِكُوا۟ بِعِصَمِ ٱلْكَوَافِرِ وَسْـَٔلُوا۟ مَآ أَنفَقْتُمْ وَلْيَسْـَٔلُوا۟ مَآ أَنفَقُوا۟ ذَٰلِكُمْ حُكْمُ ٱللَّهِ يَحْكُمُ بَيْنَكُمْ وَٱللَّهُ عَلِيمٌ حَكِيمٌ

Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನಿಮ್ಮ ಬಳಿಗೆ ಸತ್ಯವಿಶ್ವಾಸಿ ಮಹಿಳೆಯರು ಹಿಜ್ರ (ವಲಸೆ) ಮಾಡಿ ಬಂದರೆ ಅವರನ್ನು ಪರೀಕ್ಷಿಸಿರಿ. ಅಲ್ಲಾಹನಿಗೆ ಅವರ ವಿಶ್ವಾಸದ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಅವರು ಸತ್ಯವಿಶ್ವಾಸಿಗಳೆಂದು ನಿಮಗೆ ಖಾತ್ರಿಯಾದರೆ ಅವರನ್ನು ಸತ್ಯನಿಷೇಧಿಗಳ ಬಳಿಗೆ ಮರಳಿ ಕಳುಹಿಸಬೇಡಿ. ಈ ಮಹಿಳೆಯರು ಅವರಿಗೆ (ಸತ್ಯನಿಷೇಧಿಗಳಿಗೆ) ಧರ್ಮಸಮ್ಮತವಲ್ಲ. ಅವರು ಈ ಮಹಿಳೆಯರಿಗೆ ಧರ್ಮಸಮ್ಮತವಲ್ಲ. ಆ ಸತ್ಯನಿಷೇಧಿಗಳು ಮಾಡಿದ ಖರ್ಚನ್ನು ಅವರಿಗೆ ನೀಡಿರಿ. ನಂತರ ನೀವು ಈ ಮಹಿಳೆಯರಿಗೆ ಅವರ ಮಹರ್ (ವಧುದಕ್ಷಿಣೆಯನ್ನು) ನೀಡಿ ವಿವಾಹವಾಗುವುದರಲ್ಲಿ ನಿಮಗೆ ದೋಷವಿಲ್ಲ.[1] ಸತ್ಯನಿಷೇಧಿ ಮಹಿಳೆಯರೊಂದಿಗಿನ ವಿವಾಹ ಕರಾರನ್ನು ಬಳಿಯಲ್ಲಿಟ್ಟುಕೊಳ್ಳಬೇಡಿ.[2] ನೀವು ಖರ್ಚು ಮಾಡಿದ್ದನ್ನು ಕೇಳಿ ಪಡೆಯಿರಿ. ಆ ಸತ್ಯನಿಷೇಧಿಗಳು ಏನು ಖರ್ಚು ಮಾಡಿದ್ದಾರೋ ಅದನ್ನು ಅವರು ಕೇಳಿ ಪಡೆಯಲಿ. ಇದು ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುವ ಅವನ ತೀರ್ಪಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
Looking for a topic? Try the meaning search — your question is scanned across all 6,236 verses.
ಭಾಷೆ — 70