وَإِذَا جَآءَكَ ٱلَّذِينَ يُؤْمِنُونَ بِـَٔايَٰتِنَا فَقُلْ سَلَٰمٌ عَلَيْكُمْ كَتَبَ رَبُّكُمْ عَلَىٰ نَفْسِهِ ٱلرَّحْمَةَ أَنَّهُۥ مَنْ عَمِلَ مِنكُمْ سُوٓءًۢا بِجَهَٰلَةٍ ثُمَّ تَابَ مِنۢ بَعْدِهِۦ وَأَصْلَحَ فَأَنَّهُۥ غَفُورٌ رَّحِيمٌ
Kannada Translation - Hamza Buturನಮ್ಮ ವಚನಗಳಲ್ಲಿ ವಿಶ್ವಾಸವಿಡುವವರು ನಿಮ್ಮ ಬಳಿಗೆ ಬಂದರೆ ಹೇಳಿರಿ: “ನಿಮ್ಮ ಮೇಲೆ ಶಾಂತಿಯಿರಲಿ; ನಿಮ್ಮ ಪರಿಪಾಲಕನು ದಯೆ ತೋರುವುದನ್ನು ಸ್ವಯಂ ತನ್ನ ಮೇಲೆ ಕಡ್ಡಾಯಗೊಳಿಸಿದ್ದಾನೆ. ನಿಮ್ಮಲ್ಲಿ ಒಬ್ಬರು ಅರಿವಿಲ್ಲದೆ ಒಂದು ತಪ್ಪು ಮಾಡಿ, ನಂತರ ಪಶ್ಚಾತ್ತಾಪಪಟ್ಟು ಸುಧಾರಿಸಿಕೊಂಡರೆ, ನಿಶ್ಚಯವಾಗಿಯೂ ಅವನು (ಅಲ್ಲಾಹು) ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”