سَيَقُولُ ٱلَّذِينَ أَشْرَكُوا۟ لَوْ شَآءَ ٱللَّهُ مَآ أَشْرَكْنَا وَلَآ ءَابَآؤُنَا وَلَا حَرَّمْنَا مِن شَىْءٍ كَذَٰلِكَ كَذَّبَ ٱلَّذِينَ مِن قَبْلِهِمْ حَتَّىٰ ذَاقُوا۟ بَأْسَنَا قُلْ هَلْ عِندَكُم مِّنْ عِلْمٍ فَتُخْرِجُوهُ لَنَآ إِن تَتَّبِعُونَ إِلَّا ٱلظَّنَّ وَإِنْ أَنتُمْ إِلَّا تَخْرُصُونَ
Kannada Translation - Hamza Buturಬಹುದೇವಾರಾಧಕರು ಹೇಳುವರು: “ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ಅಥವಾ ನಮ್ಮ ಪೂರ್ವಜರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ ಮತ್ತು ಯಾವುದೇ ವಸ್ತುವನ್ನು ನಿಷೇಧಿಸುತ್ತಿರಲಿಲ್ಲ.” ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು—ನಮ್ಮ ಶಿಕ್ಷೆಯ ರುಚಿಯನ್ನು ನೋಡುವವರೆಗೆ. ಹೇಳಿರಿ: “ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ಇದ್ದರೆ ಅದನ್ನು ತೋರಿಸಿ. ನೀವು ಊಹಾ-ಪೋಹಗಳನ್ನು ಹಿಂಬಾಲಿಸುತ್ತಿದ್ದೀರಿ. ನೀವು ಕೇವಲ ಸುಳ್ಳನ್ನು ಹೇಳುತ್ತಿದ್ದೀರಿ.”