وَقَالَتِ ٱلْيَهُودُ وَٱلنَّصَٰرَىٰ نَحْنُ أَبْنَٰٓؤُا۟ ٱللَّهِ وَأَحِبَّٰٓؤُهُۥ قُلْ فَلِمَ يُعَذِّبُكُم بِذُنُوبِكُم بَلْ أَنتُم بَشَرٌ مِّمَّنْ خَلَقَ يَغْفِرُ لِمَن يَشَآءُ وَيُعَذِّبُ مَن يَشَآءُ وَلِلَّهِ مُلْكُ ٱلسَّمَٰوَٰتِ وَٱلْأَرْضِ وَمَا بَيْنَهُمَا وَإِلَيْهِ ٱلْمَصِيرُ
Kannada Translation - Hamza Buturಯಹೂದಿಗಳು ಮತ್ತು ಕ್ರೈಸ್ತರು ಹೇಳುತ್ತಾರೆ: “ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿಪಾತ್ರರು.”[1] ಹೇಳಿರಿ: “ಹಾಗಾದರೆ, ನೀವು ತಪ್ಪು ಮಾಡಿದರೆ ಅವನು ನಿಮ್ಮನ್ನು ಶಿಕ್ಷಿಸುವುದೇಕೆ?” ಅಲ್ಲ, ವಾಸ್ತವವಾಗಿ ನೀವೆಲ್ಲರೂ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ನೀವೆಲ್ಲರೂ ಅವನ ಬಳಿಗೇ ಮರಳಿ ಹೋಗಬೇಕಾಗಿದೆ.