لَّقَدْ صَدَقَ ٱللَّهُ رَسُولَهُ ٱلرُّءْيَا بِٱلْحَقِّ لَتَدْخُلُنَّ ٱلْمَسْجِدَ ٱلْحَرَامَ إِن شَآءَ ٱللَّهُ ءَامِنِينَ مُحَلِّقِينَ رُءُوسَكُمْ وَمُقَصِّرِينَ لَا تَخَافُونَ فَعَلِمَ مَا لَمْ تَعْلَمُوا۟ فَجَعَلَ مِن دُونِ ذَٰلِكَ فَتْحًا قَرِيبًا
Kannada Translation - Hamza Buturಅಲ್ಲಾಹು ತನ್ನ ಸಂದೇಶವಾಹಕರಿಗೆ ತೋರಿಸಿದ ಕನಸನ್ನು ಸಾಕಾರಗೊಳಿಸಿದನು. ಅಂದರೆ ಅಲ್ಲಾಹು ಇಚ್ಛಿಸಿದರೆ ನೀವು ನಿರ್ಭಯರಾಗಿ, ತಲೆಗೂದಲು ಬೋಳಿಸಿ ಮತ್ತು ಕಿರಿದಾಗಿಸಿದ ಸ್ಥಿತಿಯಲ್ಲಿ ಯಾರನ್ನೂ ಭಯಪಡದೆ ಪವಿತ್ರ ಮಸೀದಿಯನ್ನು ಪ್ರವೇಶಿಸುವಿರಿ (ಎಂಬ ಕನಸು). ನೀವು ತಿಳಿಯದೇ ಇರುವ ವಿಷಯಗಳನ್ನು ಅವನು ತಿಳಿದಿದ್ದಾನೆ. ಆದ್ದರಿಂದ ಅವನು ಅದಕ್ಕೆ ಮೊದಲು ಹತ್ತಿರದಲ್ಲೇ ಇರುವ ಒಂದು ವಿಜಯವನ್ನು ನಿಮಗೆ ಸುಗಮಗೊಳಿಸಿದನು.[1]