هَٰٓأَنتُمْ هَٰٓؤُلَآءِ تُدْعَوْنَ لِتُنفِقُوا۟ فِى سَبِيلِ ٱللَّهِ فَمِنكُم مَّن يَبْخَلُ وَمَن يَبْخَلْ فَإِنَّمَا يَبْخَلُ عَن نَّفْسِهِۦ وَٱللَّهُ ٱلْغَنِىُّ وَأَنتُمُ ٱلْفُقَرَآءُ وَإِن تَتَوَلَّوْا۟ يَسْتَبْدِلْ قَوْمًا غَيْرَكُمْ ثُمَّ لَا يَكُونُوٓا۟ أَمْثَٰلَكُم
Kannada Translation - Hamza Buturತಿಳಿಯಿರಿ! ನಿಮ್ಮನ್ನು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಲು ಕರೆಯಲಾಗುತ್ತದೆ. ಆಗ ನಿಮ್ಮಲ್ಲಿ ಕೆಲವರು ಜಿಪುಣತನ ತೋರುತ್ತಾರೆ. ಯಾರಾದರೂ ಜಿಪುಣತನ ತೋರಿದರೆ ಅವನು ಜಿಪುಣತನ ತೋರುವುದು ಸ್ವಯಂ ಅವನ ವಿರುದ್ಧವೇ ಆಗಿದೆ. ಅಲ್ಲಾಹನಿಗೆ ಯಾರ ಅಗತ್ಯವೂ ಇಲ್ಲ. ಆದರೆ ನಿಮಗೆ ಅಲ್ಲಾಹನ ಅಗತ್ಯವಿದೆ. ನೀವೇನಾದರೂ ತಿರುಗಿ ನಡೆದರೆ ಅವನು ನಿಮಗೆ ಬದಲಿಯಾಗಿ ನಿಮ್ಮ ಹೊರತಾದ ಬೇರೆ ಜನರನ್ನು ತರುವನು. ನಂತರ ಅವರು ನಿಮ್ಮಂತೆ ಆಗಿರಲಾರರು.