وَيَوْمَ يُعْرَضُ ٱلَّذِينَ كَفَرُوا۟ عَلَى ٱلنَّارِ أَذْهَبْتُمْ طَيِّبَٰتِكُمْ فِى حَيَاتِكُمُ ٱلدُّنْيَا وَٱسْتَمْتَعْتُم بِهَا فَٱلْيَوْمَ تُجْزَوْنَ عَذَابَ ٱلْهُونِ بِمَا كُنتُمْ تَسْتَكْبِرُونَ فِى ٱلْأَرْضِ بِغَيْرِ ٱلْحَقِّ وَبِمَا كُنتُمْ تَفْسُقُونَ
Kannada Translation - Hamza Buturಸತ್ಯನಿಷೇಧಿಗಳನ್ನು ನರಕದ ಮುಂದೆ ಹಾಜರುಪಡಿಸಲಾಗುವ ದಿನ! (ಅವರೊಡನೆ ಹೇಳಲಾಗುವುದು): “ನೀವು ಇಹಲೋಕ ಜೀವನದಲ್ಲೇ ನಿಮ್ಮ ಸತ್ಕರ್ಮಗಳನ್ನು ಹಾಳು ಮಾಡಿದ್ದೀರಿ ಮತ್ತು ಅದರ ಲಾಭವನ್ನು ಪಡೆದಿದ್ದೀರಿ. ನೀವು ಭೂಮಿಯಲ್ಲಿ ಅನ್ಯಾಯವಾಗಿ ಅಹಂಕಾರ ತೋರುತ್ತಿದ್ದ ಮತ್ತು ದುಷ್ಕರ್ಮವೆಸಗುತ್ತಿದ್ದ ಕಾರಣ ಇಂದು ನಿಮಗೆ ಅವಮಾನಕರ ಶಿಕ್ಷೆಯನ್ನು ಪ್ರತಿಫಲವಾಗಿ ನೀಡಲಾಗುವುದು.”