وَٱذْكُرْ أَخَا عَادٍ إِذْ أَنذَرَ قَوْمَهُۥ بِٱلْأَحْقَافِ وَقَدْ خَلَتِ ٱلنُّذُرُ مِنۢ بَيْنِ يَدَيْهِ وَمِنْ خَلْفِهِۦٓ أَلَّا تَعْبُدُوٓا۟ إِلَّا ٱللَّهَ إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
Kannada Translation - Hamza Buturಆದ್ ಗೋತ್ರದವರ ಸಹೋದರ (ಹೂದ್‍ರನ್ನು) ಸ್ಮರಿಸಿರಿ. ಅವರು ಅಹ್ಕಾಫ್‍ನಲ್ಲಿರುವ[1] ತಮ್ಮ ಜನರಿಗೆ ಮುನ್ನೆಚ್ಚರಿಕೆ ನೀಡಿದ ಸಂದರ್ಭ. ಅವರಿಗಿಂತ ಮೊದಲು ಮತ್ತು ಅವರ ನಂತರ ಅನೇಕ ಮುನ್ನೆಚ್ಚರಿಕೆಗಾರರು (ಪ್ರವಾದಿಗಳು) ಬಂದು ಹೋಗಿದ್ದಾರೆ. “ನೀವು ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ. ನಿಶ್ಚಯವಾಗಿಯೂ ನಿಮ್ಮ ಮೇಲೆ ಆ ಭಯಾನಕವಾದ ದಿನದ ಶಿಕ್ಷೆಯನ್ನು ನಾನು ಭಯಪಡುತ್ತಿದ್ದೇನೆ” (ಎಂದು ಅವರು ಎಚ್ಚರಿಸಿದರು).