وَإِذَا جَآءَهُمْ أَمْرٌ مِّنَ ٱلْأَمْنِ أَوِ ٱلْخَوْفِ أَذَاعُوا۟ بِهِۦ وَلَوْ رَدُّوهُ إِلَى ٱلرَّسُولِ وَإِلَىٰٓ أُو۟لِى ٱلْأَمْرِ مِنْهُمْ لَعَلِمَهُ ٱلَّذِينَ يَسْتَنۢبِطُونَهُۥ مِنْهُمْ وَلَوْلَا فَضْلُ ٱللَّهِ عَلَيْكُمْ وَرَحْمَتُهُۥ لَٱتَّبَعْتُمُ ٱلشَّيْطَٰنَ إِلَّا قَلِيلًا
Kannada Translation - Hamza Buturಅವರಿಗೆ ಶಾಂತಿ ಅಥವಾ ಭೀತಿಯ ಸುದ್ದಿಗಳು ತಲುಪಿದೊಡನೆ ಅವರು ಅದನ್ನು ಪ್ರಚಾರ ಮಾಡುತ್ತಾರೆ. ಅವರು ಅದನ್ನು ಸಂದೇಶವಾಹಕರಿಗೆ ಮತ್ತು ಅವರಲ್ಲಿ ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ವಿದ್ವಾಂಸರಿಗೆ ಬಿಟ್ಟು ಬಿಡುತ್ತಿದ್ದರೆ, ಅವರು ಅದರ ಸತ್ಯಾಸತ್ಯತೆಗಳನ್ನು ತಿಳಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ನಿಮ್ಮಲ್ಲಿ ಕೆಲವರ ಹೊರತು ಎಲ್ಲರೂ ಶೈತಾನನನ್ನು ಹಿಂಬಾಲಿಸುತ್ತಿದ್ದರು.