وَإِنْ خِفْتُمْ شِقَاقَ بَيْنِهِمَا فَٱبْعَثُوا۟ حَكَمًا مِّنْ أَهْلِهِۦ وَحَكَمًا مِّنْ أَهْلِهَآ إِن يُرِيدَآ إِصْلَٰحًا يُوَفِّقِ ٱللَّهُ بَيْنَهُمَآ إِنَّ ٱللَّهَ كَانَ عَلِيمًا خَبِيرًا
Kannada Translation - Hamza Buturಅವರಿಬ್ಬರ (ಗಂಡ-ಹೆಂಡತಿಯ) ನಡುವೆ ಒಡಕು ಮೂಡಬಹುದೆಂದು ನೀವು ಭಯಪಟ್ಟರೆ, ಅವನ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಮತ್ತು ಅವಳ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಕಳುಹಿಸಿರಿ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಬಯಸುವುದಾದರೆ ಅಲ್ಲಾಹು ಅವರ ನಡುವೆ ಹೊಂದಾಣಿಕೆ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.