ٱلنَّبِىُّ أَوْلَىٰ بِٱلْمُؤْمِنِينَ مِنْ أَنفُسِهِمْ وَأَزْوَٰجُهُۥٓ أُمَّهَٰتُهُمْ وَأُو۟لُوا۟ ٱلْأَرْحَامِ بَعْضُهُمْ أَوْلَىٰ بِبَعْضٍ فِى كِتَٰبِ ٱللَّهِ مِنَ ٱلْمُؤْمِنِينَ وَٱلْمُهَٰجِرِينَ إِلَّآ أَن تَفْعَلُوٓا۟ إِلَىٰٓ أَوْلِيَآئِكُم مَّعْرُوفًا كَانَ ذَٰلِكَ فِى ٱلْكِتَٰبِ مَسْطُورًا
Kannada Translation - Hamza Buturಸತ್ಯವಿಶ್ವಾಸಿಗಳಿಗೆ ಸ್ವಯಂ ಅವರಿಗಿಂತಲೂ ಹೆಚ್ಚು ಪ್ರವಾದಿಯವರು ಆಪ್ತರಾಗಿದ್ದಾರೆ.[1] ಅವರ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರಾಗಿದ್ದಾರೆ.[2] ಅಲ್ಲಾಹನ ಗ್ರಂಥದಲ್ಲಿ ಇತರ ಸತ್ಯವಿಶ್ವಾಸಿಗಳು ಮತ್ತು ಮುಹಾಜಿರರಿಗಿಂತಲೂ ಹೆಚ್ಚು ರಕ್ತ ಸಂಬಂಧಿಗಳು ಪರಸ್ಪರ ಆಪ್ತರಾಗಿದ್ದಾರೆ.[3] ಆದರೆ ನೀವು ನಿಮ್ಮ ಮಿತ್ರರೊಡನೆ ಉತ್ತಮವಾಗಿ ವರ್ತಿಸುವುದು ಇದರಿಂದ ಹೊರತಾಗಿದೆ. ಅದು ಗ್ರಂಥದಲ್ಲಿ ದಾಖಲಿಸಲಾದ ನಿಯಮವಾಗಿದೆ.