إِنَّ قَٰرُونَ كَانَ مِن قَوْمِ مُوسَىٰ فَبَغَىٰ عَلَيْهِمْ وَءَاتَيْنَٰهُ مِنَ ٱلْكُنُوزِ مَآ إِنَّ مَفَاتِحَهُۥ لَتَنُوٓأُ بِٱلْعُصْبَةِ أُو۟لِى ٱلْقُوَّةِ إِذْ قَالَ لَهُۥ قَوْمُهُۥ لَا تَفْرَحْ إِنَّ ٱللَّهَ لَا يُحِبُّ ٱلْفَرِحِينَ
Kannada Translation - Hamza Buturನಿಶ್ಚಯವಾಗಿಯೂ ಕಾರೂನ್ ಮೂಸಾರ ಜನರಲ್ಲಿ ಸೇರಿದವನಾಗಿದ್ದನು.[1] ಅವನು ಅವರ ಮೇಲೆ ಅತಿರೇಕವೆಸಗುತ್ತಿದ್ದನು. ನಾವು ಅವನಿಗೆ ಎಷ್ಟು ದೊಡ್ಡ ದೊಡ್ಡ ಖಜಾನೆಗಳನ್ನು ನೀಡಿದ್ದೇವೆಂದರೆ, ಬಲಿಷ್ಠರಾದ ಹಲವಾರು ಜನರು ಕೂಡ ಬಹಳ ಕಷ್ಟದಿಂದಲೇ ಅವುಗಳ ಕೀಲಿಕೈಗಳನ್ನು ಹೊತ್ತು ಸಾಗುತ್ತಿದ್ದರು. ಅವನ ಜನರು ಅವನೊಡನೆ ಹೇಳಿದ ಸಂದರ್ಭ: “ಅಟ್ಟಹಾಸ ಮೆರೆಯಬೇಡ. ಖಂಡಿತನಾಗಿಯೂ ಅಟ್ಟಹಾಸ ಮೆರೆಯುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.