أَلَمْ تَرَ أَنَّ ٱللَّهَ يَسْجُدُ لَهُۥ مَن فِى ٱلسَّمَٰوَٰتِ وَمَن فِى ٱلْأَرْضِ وَٱلشَّمْسُ وَٱلْقَمَرُ وَٱلنُّجُومُ وَٱلْجِبَالُ وَٱلشَّجَرُ وَٱلدَّوَآبُّ وَكَثِيرٌ مِّنَ ٱلنَّاسِ وَكَثِيرٌ حَقَّ عَلَيْهِ ٱلْعَذَابُ وَمَن يُهِنِ ٱللَّهُ فَمَا لَهُۥ مِن مُّكْرِمٍ إِنَّ ٱللَّهَ يَفْعَلُ مَا يَشَآءُ
Kannada Translation - Hamza Buturಆಕಾಶಗಳಲ್ಲಿರುವವರು, ಭೂಮಿಯಲ್ಲಿರುವವರು, ಸೂರ್ಯ, ಚಂದ್ರ, ತಾರೆಗಳು, ಪರ್ವತಗಳು, ಮರಗಳು, ಜೀವರಾಶಿಗಳು ಮತ್ತು ಜನರಲ್ಲಿ ಅನೇಕರು ಅಲ್ಲಾಹನಿಗೆ ಸಾಷ್ಟಾಂಗ ಮಾಡುವುದನ್ನು ನೀವು ನೋಡುವುದಿಲ್ಲವೇ? ಶಿಕ್ಷೆಯು ದೃಢಪಟ್ಟ ಅನೇಕ ಮಂದಿಯೂ ಜನರಲ್ಲಿದ್ದಾರೆ. ಅಲ್ಲಾಹು ಯಾರನ್ನು ಅವಮಾನಿಸುತ್ತಾನೋ ಅವನಿಗೆ ಗೌರವ ನೀಡುವವರಾರೂ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.