caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ An-Nahl, ಆಯತ್ 80

ಮಕ್ಕಾ · ಅವತರಣ ಕ್ರಮ 70 · 16:80

وَٱللَّهُ جَعَلَ لَكُم مِّنۢ بُيُوتِكُمْ سَكَنًا وَجَعَلَ لَكُم مِّن جُلُودِ ٱلْأَنْعَٰمِ بُيُوتًا تَسْتَخِفُّونَهَا يَوْمَ ظَعْنِكُمْ وَيَوْمَ إِقَامَتِكُمْ وَمِنْ أَصْوَافِهَا وَأَوْبَارِهَا وَأَشْعَارِهَآ أَثَٰثًا وَمَتَٰعًا إِلَىٰ حِينٍ

Kannada Translation - Hamza Buturಅಲ್ಲಾಹು ನಿಮಗೆ ನಿಮ್ಮ ಮನೆಗಳಲ್ಲಿ ವಿಶ್ರಾಂತಿಯ ಸ್ಥಳವನ್ನು ಮಾಡಿಕೊಟ್ಟಿದ್ದಾನೆ. ಜಾನುವಾರುಗಳ ತೊಗಲುಗಳಿಂದಲೂ ಅವನು ನಿಮಗೆ ಮನೆಗಳನ್ನು (ಡೇರೆಗಳನ್ನು) ಮಾಡಿಕೊಟ್ಟಿದ್ದಾನೆ. ನೀವು ಪ್ರಯಾಣ ಮಾಡುವ ದಿನಗಳಲ್ಲೂ ಮತ್ತು ಬಿಡಾರ ಹೂಡುವ ದಿನಗಳಲ್ಲೂ ಅವುಗಳನ್ನು ಅನಾಯಾಸವಾಗಿ ಒಯ್ಯುತ್ತೀರಿ. ಅವುಗಳ ಉಣ್ಣೆ, ತುಪ್ಪಳ ಮತ್ತು ಕೇಶಗಳಿಂದ ನೀವು ನಿಗದಿತ ಕಾಲದವರೆಗೆ ಉಪಯೋಗಗಳನ್ನು ಮತ್ತು ಆನಂದವನ್ನು ಪಡೆಯುತ್ತೀರಿ.
Looking for a topic? Try the meaning search — your question is scanned across all 6,236 verses.
ಭಾಷೆ — 70