وَٱلسَّٰبِقُونَ ٱلْأَوَّلُونَ مِنَ ٱلْمُهَٰجِرِينَ وَٱلْأَنصَارِ وَٱلَّذِينَ ٱتَّبَعُوهُم بِإِحْسَٰنٍ رَّضِىَ ٱللَّهُ عَنْهُمْ وَرَضُوا۟ عَنْهُ وَأَعَدَّ لَهُمْ جَنَّٰتٍ تَجْرِى تَحْتَهَا ٱلْأَنْهَٰرُ خَٰلِدِينَ فِيهَآ أَبَدًا ذَٰلِكَ ٱلْفَوْزُ ٱلْعَظِيمُ
Kannada Translation - Hamza Buturಮುಹಾಜಿರ್ ಮತ್ತು ಅನ್ಸಾರ್‌ಗಳಲ್ಲಿ ಮೊತ್ತಮೊದಲು ಸತ್ಯವಿಶ್ವಾಸ ಸ್ವೀಕರಿಸಿ ಮುಂಚೂಣಿಯಲ್ಲಿರುವವರ ಬಗ್ಗೆ ಮತ್ತು ಒಳಿತಿನ ಮೂಲಕ ಅವರನ್ನು ಹಿಂಬಾಲಿಸಿದವರ ಬಗ್ಗೆ ಅಲ್ಲಾಹು ಸಂಪ್ರೀತನಾಗಿದ್ದಾನೆ. ಅವನ ಬಗ್ಗೆ ಅವರೂ ಸಂಪ್ರೀತರಾಗಿದ್ದಾರೆ. ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳನ್ನು ಅವನು ಅವರಿಗಾಗಿ ಸಿದ್ಧಗೊಳಿಸಿದ್ದಾನೆ. ಅವರು ಅದರಲ್ಲಿ ಸದಾಕಾಲ ಶಾಶ್ವತವಾಗಿ ವಾಸಿಸುವರು. ಅದೇ ಅತಿದೊಡ್ಡ ವಿಜಯ.