قَالَ مَا مَنَعَكَ أَلَّا تَسْجُدَ إِذْ أَمَرْتُكَ قَالَ أَنَا۠ خَيْرٌ مِّنْهُ خَلَقْتَنِى مِن نَّارٍ وَخَلَقْتَهُۥ مِن طِينٍ
Kannada Translation - Hamza Buturಅಲ್ಲಾಹು ಕೇಳಿದನು: “ನಾನು ಸಾಷ್ಟಾಂಗ ಮಾಡಲು ಆಜ್ಞಾಪಿಸಿದಾಗ ನೀನು ಅದನ್ನು ನಿರಾಕರಿಸಲು ಕಾರಣವೇನು?” ಇಬ್ಲೀಸ್ ಹೇಳಿದನು: “ನಾನು ಆದಮರಿಗಿಂತಲೂ ಶ್ರೇಷ್ಠನು. ನೀನು ನನ್ನನ್ನು ಸೃಷ್ಟಿಸಿದ್ದು ಅಗ್ನಿಯಿಂದ ಮತ್ತು ಅವರನ್ನು ಸೃಷ್ಟಿಸಿದ್ದು ಜೇಡಿಮಣ್ಣಿನಿಂದ.”