caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Al-Ahqaf, ಆಯತ್ 17

ಮಕ್ಕಾ · ಅವತರಣ ಕ್ರಮ 66 · 46:17

وَٱلَّذِى قَالَ لِوَٰلِدَيْهِ أُفٍّ لَّكُمَآ أَتَعِدَانِنِىٓ أَنْ أُخْرَجَ وَقَدْ خَلَتِ ٱلْقُرُونُ مِن قَبْلِى وَهُمَا يَسْتَغِيثَانِ ٱللَّهَ وَيْلَكَ ءَامِنْ إِنَّ وَعْدَ ٱللَّهِ حَقٌّ فَيَقُولُ مَا هَٰذَآ إِلَّآ أَسَٰطِيرُ ٱلْأَوَّلِينَ

Kannada Translation - Hamza Buturಆದರೆ ಯಾರು ತನ್ನ ಮಾತಾಪಿತರಿಗೆ ಹೀಗೆ ಹೇಳುತ್ತಾನೋ: “ನನಗೆ ನಿಮ್ಮ ಸಹವಾಸ ಸಾಕಾಗಿ ಹೋಗಿದೆ! ನನಗಿಂತ ಮೊದಲು ಕೂಡ ಅನೇಕ ತಲೆಮಾರುಗಳು ಕಳೆದುಹೋಗಿರುವಾಗ ನಾನು ಸತ್ತ ಬಳಿಕ ನನ್ನನ್ನು ಪುನಃ ಜೀವಂತಗೊಳಿಸಲಾಗುವುದು ಎಂದು ನೀವು ನನಗೆ ವಾಗ್ದಾನ ಮಾಡುತ್ತಿದ್ದೀರಾ?” ಅವರು (ತಂದೆ-ತಾಯಿ) ಅಲ್ಲಾಹನ ಮುಂದೆ ಅಳಲನ್ನು ತೋಡಿಕೊಳ್ಳುತ್ತಾ ಅವನೊಡನೆ ಹೇಳುತ್ತಾರೆ: “ನಿನಗೆ ದುರ್ಗತಿ ಕಾದಿದೆ! ಸತ್ಯವಿಶ್ವಾಸವನ್ನು ಸ್ವೀಕರಿಸು! ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ.” ಆಗ ಅವನು ಹೇಳುತ್ತಾನೆ: “ಇವು ಪುರಾತನ ಕಾಲದ ಜನರ ಕಟ್ಟುಕಥೆಗಳಲ್ಲದೆ ಇನ್ನೇನೂ ಅಲ್ಲ.”
Looking for a topic? Try the meaning search — your question is scanned across all 6,236 verses.
ಭಾಷೆ — 70