caseriqಕುರ್‌ಆನ್‌ನಲ್ಲಿ ಅರ್ಥಾಧಾರಿತ ಹುಡುಕಾಟ

ಸೂರ Faatir, ಆಯತ್ 12

ಮಕ್ಕಾ · ಅವತರಣ ಕ್ರಮ 43 · 35:12

وَمَا يَسْتَوِى ٱلْبَحْرَانِ هَٰذَا عَذْبٌ فُرَاتٌ سَآئِغٌ شَرَابُهُۥ وَهَٰذَا مِلْحٌ أُجَاجٌ وَمِن كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا وَتَرَى ٱلْفُلْكَ فِيهِ مَوَاخِرَ لِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ

Kannada Translation - Hamza Buturಎರಡು ಸಮುದ್ರಗಳು ಸಮಾನವಲ್ಲ. ಇದರಲ್ಲಿರುವ ನೀರು ತಾಜಾ ಮತ್ತು ರುಚಿಯಾಗಿದ್ದು ಕುಡಿಯಲು ಆಹ್ಲಾದಕರವಾಗಿದೆ. ಅದು ಕಹಿ ಉಪ್ಪು ನೀರನ್ನು ಹೊಂದಿದೆ. ಆದರೆ, ಈ ಎರಡು ನೀರಿನಿಂದಲೂ ನೀವು ತಾಜಾ ಮಾಂಸವನ್ನು (ಮೀನುಗಳನ್ನು) ತಿನ್ನುತ್ತೀರಿ ಮತ್ತು ನೀವು ಧರಿಸುವ ಆಭರಣಗಳನ್ನು (ಮುತ್ತು-ಹವಳ) ಹೊರತೆಗೆಯುತ್ತೀರಿ. ನಾವೆಗಳು ಅದರ ನೀರನ್ನು ಸೀಳುತ್ತಾ ಸಾಗುವುದನ್ನು ನೀವು ನೋಡುತ್ತೀರಿ. ಇವೆಲ್ಲವೂ ನೀವು ಅಲ್ಲಾಹನ ಔದಾರ್ಯದಿಂದ ಉಪಜೀವನವನ್ನು ಹುಡುಕಲೆಂದು ಮತ್ತು ಅವನಿಗೆ ಕೃತಜ್ಞರಾಗಲೆಂದಾಗಿದೆ.
Looking for a topic? Try the meaning search — your question is scanned across all 6,236 verses.
ಭಾಷೆ — 70