وَقَالُوٓا۟ إِن نَّتَّبِعِ ٱلْهُدَىٰ مَعَكَ نُتَخَطَّفْ مِنْ أَرْضِنَآ أَوَلَمْ نُمَكِّن لَّهُمْ حَرَمًا ءَامِنًا يُجْبَىٰٓ إِلَيْهِ ثَمَرَٰتُ كُلِّ شَىْءٍ رِّزْقًا مِّن لَّدُنَّا وَلَٰكِنَّ أَكْثَرَهُمْ لَا يَعْلَمُونَ
Kannada Translation - Hamza Buturಅವರು ಹೇಳುತ್ತಾರೆ: “ನಾವೇನಾದರೂ ನಿಮ್ಮ ಜೊತೆಗೆ ಸೇರಿ ಸನ್ಮಾರ್ಗವನ್ನು ಹಿಂಬಾಲಿಸಿದರೆ ನಮ್ಮನ್ನು ನೆಲದಿಂದ ಕಿತ್ತೆಸೆಯಲಾಗಬಹುದು.” ನಾವು ಅವರಿಗೆ ನಿರ್ಭಯವಾದ ಒಂದು ಪವಿತ್ರ ಸ್ಥಳದಲ್ಲಿ (ಹರಂನಲ್ಲಿ) ಬದುಕುವ ಅವಕಾಶ ಮಾಡಿಕೊಡಲಿಲ್ಲವೇ? ಅಲ್ಲಿಗೆ ಎಲ್ಲಾ ವಸ್ತುಗಳ ಫಲಗಳನ್ನು ನಮ್ಮ ಕಡೆಯ ಉಪಜೀವನವಾಗಿ ತರಲಾಗುತ್ತದೆ. ಆದರೆ ಅವರಲ್ಲಿ ಹೆಚ್ಚಿನವರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ.