وَقَالَ فِرْعَوْنُ يَٰٓأَيُّهَا ٱلْمَلَأُ مَا عَلِمْتُ لَكُم مِّنْ إِلَٰهٍ غَيْرِى فَأَوْقِدْ لِى يَٰهَٰمَٰنُ عَلَى ٱلطِّينِ فَٱجْعَل لِّى صَرْحًا لَّعَلِّىٓ أَطَّلِعُ إِلَىٰٓ إِلَٰهِ مُوسَىٰ وَإِنِّى لَأَظُنُّهُۥ مِنَ ٱلْكَٰذِبِينَ
Kannada Translation - Hamza Buturಫರೋಹ ಹೇಳಿದನು: “ಮುಖಂಡರೇ! ನಿಮಗೆ ನನ್ನ ಹೊರತು ಬೇರೆ ದೇವರು ಇದ್ದಾನೆಂದು ನನಗೆ ತಿಳಿದಿಲ್ಲ. ಓ ಹಾಮಾನ್! ನನಗೆ ಜೇಡಿಮಣ್ಣನ್ನು ಸುಟ್ಟು (ಇಟ್ಟಿಗೆಗಳನ್ನು) ಮಾಡಿಕೊಡು. ನಂತರ ನನಗೆ ಒಂದು ಎತ್ತರದ ಗೋಪುರವನ್ನು ನಿರ್ಮಿಸಿಕೊಡು. ನಾನು (ಅದನ್ನು ಏರಿ) ಮೂಸಾನ ದೇವನನ್ನು ಒಮ್ಮೆ ಇಣುಕಿ ನೋಡಬೇಕು. ಖಂಡಿತವಾಗಿಯೂ ಅವನು ಸುಳ್ಳು ಹೇಳುವವರಲ್ಲಿ ಸೇರಿದವನೆಂದು ನಾನು ಭಾವಿಸುತ್ತೇನೆ.”